ಬೇಳಗಾಗ್ನಲ್ಲೇ ಮಗನ್ಯೆ (ದೀವರ ಭಾಷೆಯಲ್ಲಿ ಕವನ)

ಸೊರಬ ಸಾಗರ ಸುತ್ತಲಿನ ದೀವರು ಅಥವಾ ಈಡಿಗರು ಎನ್ನುವ ಜಾತಿಯವರು ಮತ್ತು ವಕ್ಕಲಿಗರು ಆಡುವ ಮಾತಿನಲ್ಲಿ ವ್ಯತ್ಯಾಸ ಇದೆ. ಆದರೂ ಒಂದು ಸಾಮ್ಯವೂ ಇದೆ. ಅವರದು ಶುದ್ಧವಾದ ಕನ್ನಡ. ಹಳೆಯರೂಪದ ಕನ್ನಡ ಪದ ಬಳಕೆ ಅನ್ಯ ಭಾಷೆಯ ಪದ ಇಲ್ಲವೇ ಇಲ್ಲ ಎನ್ನಬಹುದು ಅಷ್ಟು ಶುದ್ಧ. ಸಂಸ್ಕೃತದ ಬಳಕೆಯೇ ಇಲ್ಲ. ಆದರೆ ಭಾವನೆಗಳನ್ನು ಆಶಯವನ್ನು ವ್ಯಕ್ತಪಡಿಸುವಲ್ಲಿ ಈ ಭಾಷೆಗೆ ಇರುವ ಶಕ್ತಿ ಮುಖ್ಯವಾಹಿನಿಯ ಕನ್ನಡಕ್ಕೆ ಇಲ್ಲವೇ ಇಲ್ಲ ಎಂದು ಕಣ್ಣುಮುಚ್ಚಿ ಹೇಳಬಹುದು. ಕೆಳಗಿನ ಕವನ ದೀವರ ಭಾಷೆಯಲ್ಲಿ ಇದೆ. ಓದಿ ಆನಂದಿಸಿ. ಊರಿಗೆ ಹೋದಾಗ ದೀವರಲ್ಲೆ ಕೇಳಿ ಏನಾದರು ತಪ್ಪು ಇದ್ದರೆ ಸರಿಪಡಿಸುತ್ತೇನೆ.


ಬೇಳಗಾಗ್ನಲ್ಲೇ ಮಗನ್ಯೆ (ದೀವರ ಭಾಷೆಯಲ್ಲಿ ಕವನ)
===============================
ಹುಣವಳ್ಳಿ ಗುಡ್ಡುದಗೆ ಹುಲಿ ಬಂದು ಕುಂತೈತಿ
ಹುಲಿಯಪ್ಪುನ ಕಣಿವೆಯಗೆ ಬಾಳ ಕೂಗ್ಯಾಟ
ಹುಡ್ರು ಮಕ್ಕುಳುನೆಲ್ಲ ಗುಡ್ರಾಕಿ ತಿಂತೈತಿ
ಮುಸ್ಕಾಕ್ಯಂದು ಮಲಗೋ ಮರಿಯಪ್ಪ

ಕೋಳಿ ಗುಡ್ಡುದ ಮ್ಯಾಲೆ ನವಿಲೇರಿ ಕುಂತಾವೆ
ಹೊತಾರಿಕೆ ಗರಿ ಬಿಚ್ಚಿ ಕುಣಿತಾವೆ
ಕರಕಂದು ಹೋಕೇನಿ ನೋಡ್ಕ್ಯಂದು ಬರಬೈದು
ಬೇಳಗಾಗ್ನಲ್ಲಲ್ಲೇ ಮಗನ್ಯೆ ಮನ್ಕ್ಯಳಲೇ

ಕಾಡ್ನೆಲ್ಲಿ ಕೊಯ್ಕ್ಯುಂದು ಸೊಪ್ಪು ಸದಿ ಹಿಡುಕುಂದು
ತಗುಬರಕೆ ಹೋಗಾನ ಬೆಳಕ್ಕರಿಲಿ
ಮಾಡ್ಮ್ಯಾಲೆ ಕರಿಮಾಳ ಕ್ಯಸ್ ಅಂತೈತಿ
ಬೇಗ ಮಲಗಲೆ ಮಗನ್ಯೆ ಗುಮ್ಮ ಬತ್ತೈತಿ
================================

Comments

  1. ಆಸಕ್ತಿಕರವಾಗಿದೆ. ದೀವರ ನುಡಿಯಲ್ಲಿ ಈ ಜಾನಪದ ಇದೆಯಾ ಅಥವಾ ಇದು ನೀವು ರಚಿಸಿದ ಕವನವಾ?

    ReplyDelete
  2. ಇದು ನಾನು ಬರೆದಿದ್ದು. ಭಾಷೆ ದೀವರದು.

    ReplyDelete

Post a Comment

Please leave a note about what you think about this write up. Thanks.