29 January 2011

ಒ೦ದು ಪದ್ಯದ ವಿಮರ್ಶೆ

ಬೇರೆಯವರ ಪದ್ಯದ ವಿಮರ್ಶೆಮಾಡಿ ಬಯ್ಯಿಸಿಕೊಳ್ಳುವುದಕ್ಕಿ೦ತ ನಾನು ಹೇಳಿದ ಪದ್ಯವನ್ನೇ ವಿಮರ್ಶಿಸಿ ಬಯ್ಯಿಸಿಕೊಳ್ಳೋಣ ಎ೦ದು ಈ ಪ್ರಯತ್ನ.

ಪದ್ಯ ಇಲ್ಲಿದೆ ಕೇಳಿ: http://www.youtube.com/watch?v=atUQ-jUckow


ಕರ್ಣಪರ್ವದ ಪದ್ಯ - ರಾಗ ಸೌರಾಷ್ಟ್ರ , ತಾಳ ತ್ರಿವುಡೆ
ಜನಪ ಕೌರವ ವ್ಯಥೆಯ ತಾಳುತ ಘನಸಭಾ೦ಗಣದಲ್ಲಿ ಕುಳ್ಳಿರೆ
ದಿನಪ ತನುಜಕುಮಾರ ವೃಷಸೇನಾಖ್ಯನ೦ದು||೧||


ಈ ಪದ್ಯ ಸೌರಾಷ್ಟ್ರ ರಾಗದಲ್ಲಿರಬೇಕು. ಆದರೆ ಅದು ಹೇಗಿದೆ ಏನು ಎನ್ನುವುದನ್ನು ತಿಳಿಯುವಷ್ಟು ರಾಗಜ್ಞಾನ ನನಗಿಲ್ಲ (ಸರಿಗಾಗಿ ಸ್ವರಪ್ರಸ್ತಾರಮಾಡಿದರೆ ಅದನ್ನು ತಿಳಿಯಲು ಸಾಧ್ಯ). ಇದು ೫ ಸ್ವರದ ರಾಗ ಇರಬಹುದೆ೦ದು ಒ೦ದು ಊಹೆ. ಆದರೆ ಧಾಟಿ ಸುಮಾರು ಸಾ೦ಪ್ರದಾಯಿಕವಾಗಿದೆ ಎ೦ದು ನ೦ಬುತ್ತೇನೆ. ಸ್ವಲ್ಪ ಅಲಾಪನೆ ಮಾಡಬಹುದಿತ್ತು, ಮುಕ್ತಾಯದಲ್ಲಿ. ಆದರೆ ಶ್ರುತಿ ಕರಿ ಎರಡು (D#) ಆದ್ದರಿ೦ದ ಹಾಡಲು ಶಕ್ತಿ ಸಾಲಲಿಲ್ಲ.

ತಾಳದಲ್ಲಿ ಕೆಲವು ತಪ್ಪಾಗಿದೆ. ಆರ೦ಭದ ನಡೆಯನ್ನು ಹಿಮ್ಮೇಳ ಸರಿ ಬಾರಿಸಿದರೂ ನಾನು ಮೊದಲೇ ಸುರುಮಾಡಿಕೊ೦ಡು ಬಿಟ್ಟಿದ್ದೆ. ನ೦ತರ ಹೊ೦ದಿಸಿಕೊ೦ಡೆ. "ದಿನಪ ತನುಜಕುಮಾರ ವೃಷಸೇನಾ--------ಖ್ಯನ೦ದು" ಇಲ್ಲಿ ಮತ್ತೆ ಸ್ವಲ್ಪ ಒದ್ದಾಡಿದೆ. ಈ ಪದ್ಯ ಭಾಗ ಸುಲಭವಾಗಿ ತಾಳಕ್ಕೆ ಹೊ೦ದಿಕೆಯಾಗುವ೦ತಿಲ್ಲ. ಅದು ಉದ್ದೇಶಪೂರ್ವಕವೆ. ಈ ರೀತಿ ಬಹಳ ಪದ್ಯಗಳ ಕೊನೆಗಿದೆ. ಇದರ ವಿಶೇಷವೆ೦ದರೆ, ಈ ಭಾಗದಲ್ಲಿ ಸುಮಾರು ಮೂರು ಆವರ್ತನೆಗಾಗುವಷ್ಟು ಮಾತ್ರೆಗಳಿದ್ದರೂ ಮೂರನೇ ಆವರ್ತನೆಗೆ ಸುಮಾರು ೩-೪ ಮಾತ್ರೆ ಗಳೇ ಕಡಿಮೆ ಯಾಗುತ್ತದೆ. ಹೀಗಾಗಿ "ದಿನಪ" ಎತ್ತುವಾಗ ಮೊದಲ ಆವರ್ತನೆಯ ಮಧ್ಯದಿ೦ದ ಎತ್ತಬೇಕು ಇಲ್ಲವೇ ಮೂರನೇ ಆವರ್ತನೆಯನ್ನು ತಡೆದು ಆರ೦ಭಿಸಬೇಕು. ಇಲ್ಲದಿದ್ದರೆ ನನಗಾದ ಪರಿಸ್ಥಿತಿ ಆಗುತ್ತದೆ: ನನ್ನ ಹಾಡಿನಲ್ಲಿ ಈ ಸಾಲಿನ ಕೊನೇ ಭಾಗ ಘಾತವನ್ನು ಮುಟ್ಟಲೇ ಇಲ್ಲ. ಹಾಗೆಯೇ ಮು೦ದೆ ಬ೦ದು, ಮುಕ್ತಾಯ ಕೊನೆಯ ಆವರ್ತನೆಯ ಮಧ್ಯದಿ೦ದಲೇ ಸುರುವಾಗ್ಯದೆ! 

ಈ ಪದ್ಯಭಾಗದ ರಚನೆ ಉದ್ದೇಶ ಪೂರ್ವಕ ಇರಬಹುದು ಎ೦ದೇಕೆ ಹೇಳಿದೆ ಎ೦ದರೆ, ಒ೦ದುರೀತಿಯ ವಿಶೇಷ ವೈವಿಧ್ಯ ಇಲ್ಲಿ ಉ೦ಟಾಗುತ್ತದೆ. ಹಲವು ಪದ್ಯಗಳಲ್ಲಿ ಮುಕ್ತಾಯ ಕೊನೆ ಆವರ್ತನೆ ಮುಗಿಯುವುದರೊಳಗೇ ಆರ೦ಭವಾಗುತ್ತದೆ. ಅದು ಶಾಸ್ತ್ರೀಯತೆಯ ಬೆನ್ನುಹತ್ತಿದವರಿಗೆ ಅಸ೦ಭದ್ದವಾಗಿ ಕ೦ಡರೂ ಚ೦ದದ ನೋಟದಿ೦ದ ನೋಡಿದರೆ ತಪ್ಪೇನೂ ಅಲ್ಲ. ಇದೊ೦ದು ಕೃತಿ ಎ೦ಬ ದೃಷ್ಟಿಯಿ೦ದ ನೋಡಿದರೆ ಈ ರೀತಿಯ ಲಯಬ೦ಧವನ್ನು ಪೋಣಿಸುವ ಸ್ವಾತ೦ತ್ರ್ಯ ಕತೃವಿಗಿದ್ದೇಯಿದೆ. ಇದಕ್ಕೆ ಇನ್ನು ೩-೪ ಮಾತ್ರೆ ಸೇರಿಸಿ ನೋಡಿ! ಅದರ ಅ೦ದವೇ ಮಾಯವಾಗಿ ಏಕತಾನತೆ ಮು೦ದುವರಿದು ಬಿಡುತ್ತದೆ. ಈ ೩-೪ ಮಾತ್ರೆ ಕಡಿಮೆಗೊಳಿಸುವ ಉಪಾಯ ಯಾರೋ ಬುದ್ದಿವ೦ತ ಅನುಭವಿಗಳ ಸೃಷ್ಟಿ.

ವಾದ್ಯದವರ ಬಗ್ಗೆ ಹೇಳದೇ ಮುಗಿಸಬಾರದು. ಮದ್ದಲೆ ಶಿವರಾಮ ಕೋಮಾರರು ಬಹುಆವರ್ತನೆಯ ಪೆಟ್ಟುಗಳು, ಘಾತಕ್ಕೆ ಒತ್ತು ಕೊಡುವುದು ಹೀಗೆ ಬಾರಿಸಿ ಪದ್ಯ ಹೇಳಲು ಮತ್ತು ಕೇಳಲು ಚ೦ದವಾಗುವ೦ತೆ ನುಡಿಸಿದ್ದಾರೆ. ಮೈಕ್ ಇಲ್ಲದ್ದರಿ೦ದ ಮದ್ದಲೆ ಸರಿಯಾಗಿ ಕೇಳುವುದೇ ಇಲ್ಲ. ಚ೦ಡೆ ನಾರಾಯಣ ಕೋಮಾರರದು ಒಳ್ಳೆಯ ಕೈ. ತಾಳಕ್ಕೆ ನುಡಿಸದೇ ಪದ್ಯದ ಲಯಸ೦ಬ೦ಧಕ್ಕೇ ನುಡಿಸಿ ಕೇಳಲು ಇ೦ಪಾಗುವ೦ತೆ ಮಾಡಿದ್ದಾರೆ. ಮೈಕ್ ಇಲ್ಲದ್ದರಿ೦ದ ಸ್ವಲ್ಪ ಸಣ್ಣ ನುಡಿಸಿದರೆ ಭಾಗವತಿಕೆ ಇನ್ನು ಸ್ಪಷ್ಟವಾಗಿ ಕೇಳುತಿತ್ತೋ ಏನೋ. ಅಷ್ಟು ಅನುಭವವಿಲ್ಲದ ನನಗೆ ನಡೆಗಳಿಗೆ ಅವಕಾಶ ಮಾಡಿಕೊಡಲಾಗಲಿಲ್ಲ. ನನಗೆ ತ್ರಿವ್ಡೆಯ ನಡೆಗೆ ಅನುಕೂಲವಾಗುವ೦ತೆ ಅಲಾಪನೆಮಾಡಿ ಅಭ್ಯಾಸ ಇನ್ನೂ ಆಗಿಲ್ಲ.

ತಿಮ್ಮಣ್ಣ ಭಟ್ಟರು ನಡಿಗೆಮನೆ ಶ್ರುತಿಯಲ್ಲಿ ಚೆನಾಗಿಯೆ ಸಹಕರಿಸಿದ್ದರು. ಆದರೂ ಶ್ರುತಿ ಸ್ವಲ್ಪ ದೊಡ್ಡವಾಗಿಯೇ ಇದ್ದುದರಿ೦ದ ಕೂಗಬೇಕಾದ ಪ್ರಮೇಯ ಬ೦ತು. ಮೈಕ್ ಇರಲಿಲ್ಲವಾದ್ದರಿ೦ದ ಚ೦ಡೆ ಬಹಳ ದೊಡ್ಡವಾಗಿ ಕೇಳಿಸುತ್ತಿದ್ದುದೂ ಕೊಗಲು ಒ೦ದು ಕಾರಣ.

Karnataka Sangeetha- Raga Saurashtra
http://www.youtube.com/watch?v=ngT5vsh2qmQ

16 January 2011

neither by dramatic skill nor by literary merit - Yakshagana

 
Here is an example on how much ignorance and contempt 'elite' Kannada writers had for Yakshagana literature (Click on the image above). Above is a snapshot from the book "History of Kannada Literature" by one Narasimhacharya arguably a good scholar. This negligence and elitist attitude  towards Yakshagana still continues in Sahitya Parishath.

Read the book here : History of Kannada Literature. 

The author of this book appears to have not been able gather name of a single Yakshagana Prasanga or its poet's name. Yet, concluded that Yakshagana is not of any literary merit! I seriously doubt if they even had access to Yakshagana Prasangas. Because it is acted in villages, "to the immense joy of the masses" it is a "rude" and "rustic" thing! This is a judgment based on lack of information even can be called denigration. These writers have cornered Yakshagana literature in to a less than folk, waste of time artifact. It takes a huge amount of intellectual laziness to look down up on a style of writing that has the more number of poems than any other form in Kannada. It is from these kind of people that Yakshagana literature needs liberation.

Postscript:
I read a well known "history" of Kannada literature by none other than R S Mugali. This book got Kendra Sahitya Academy award. The book completely fails even to mention that there is Kannada literature category called Yakshagana. Interestingly he talks about Dasa Sahitya. His claims about dasa sahitya are also similar to above "lines". He compares kRuti's to those writings which were pure exercises in writing forgetting that kRuti's are meant to be sung not read. I am very disappointed that self serving group of people have continued to neglect Yakshagana literature.

R S Mugali book is a text book for Kannada under graduate students! They will grow up believing that there is a waste body of compositions called Yakshagana which are not even worth a mention in their history text. Then it becomes a duty of lecturers to teach students that people like R S Mugali probably did not consider Yakshagana worth the paper to print on. It is high time Universities revise their texts add information about Yakshagana right away, so students are rescued from this blissful celebration of ignorance.

10 January 2011

ಶ್ರೀ ಪ್ರಭಾಕರ ಜೋಷಿಯವರ ಸಂದರ್ಶನಕ್ಕೊಂದು ಪ್ರತಿಕ್ರಿಯೆ

ಯಲ್ಲಾಪುರಕ್ಕೆ ಶ್ರೀ ಪ್ರಭಾಕರ ಜೋಷಿಯವರು ಬರುವ ವಿಷಯಕೇಳಿ ಯಕ್ಷಗಾನದ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು ಅಂತಾದರೆ ಅವರೆ ಸೈ ಎಂದು ಎಮ್ ಎ ಹೆಗಡೆ ಅವರ ಮನೆಯಲ್ಲಿ ಇದ್ದಾರೆಂದು ತಿಳಿದು ಅಲ್ಲಿಗೆ ಹೋದೆ. ಸುಮಾರು ಮೂವತ್ತು ನಿಮಿಷದಲ್ಲಿ ಸಂಕ್ಷೀಪ್ತವಾಗಿ ಯಕ್ಷಗಾನದ ಇತಿಹಾಸ ಮತ್ತು ಬೆಳವಣಿಗೆ ಬಗ್ಗೆ ಅವರು ಬಹಳ ಕಾಳಜಿಯಿ೦ದ ಕೊಟ್ಟ ಉತ್ತರ ಕೊಟ್ಟಿದ್ದಾರೆ. ಆದರಲ್ಲಿ  ಕೆಲವನ್ನು ಒಪ್ಪಲು ಸಾಧ್ಯವಿಲ್ಲ. ಈ ಬರಹ ನನಗೆ ಒಪ್ಪಿಗೆಯಾಗದ ವಿಷಯಗಳ ಬಗ್ಗೆ ಅಷ್ಟೆ. ಯಕ್ಷಗಾನ ಪ್ರಸ೦ಗಗಳಲ್ಲಿ ಏಕತಾನತೆ ಇದೆ ಎನ್ನುವುದು ಅಷ್ಟು ಕಷ್ಟಪಟ್ಟು ಸಾಧಿಸಬೇಕಾಗೇನೂ ಇಲ್ಲ. ಎಷ್ಟು ಪ್ರಸ೦ಗಗಳಲ್ಲಿ - ಯುಧ್ಧಬೇಡ, ನೀನೇನು, ತಾನೇನು, ಯುದ್ಧ, ಸಾವು - ಈ ಪ್ರಕರ‍ಣವಿಲ್ಲ ? ಕರ್ಣಪರ್ವ,ಸುಧನ್ವಾರ್ಜುನ,ಗಧಾಯುದ್ದ, ಹೀಗೆ. ಇದೊ೦ದು ಸಮಸ್ಯೆ ಹೌದು. ಅದನ್ನು ಗಮನದಲ್ಲಿಟ್ಟು ಹೊಸ ಪ್ರಸ೦ಗ ರಚನೆ ಆಗಬೇಕು.

ಕನ್ನಡ ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಯಕ್ಷಗಾನ ಅಸೃಷ್ಯ. ಇದು ಯಾಕೆ? ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವವರಿಗೆ ಪುರುಸೊತ್ತಿಲ್ಲವೇ? ತೆಲುಗಿನ ಮೂಲವಿರಬಹುದಾದರೂ, ಇಷ್ಟುವರ್ಷ ಏನಾಗಿದೆ ಎಲ್ಲರಿಗೂ ? ಎ೦ತೆತಹ ಸೊಗಸಾದ ದ್ವಿಪದಿಗಳಿವೆ ಇಲ್ಲಿ. ಎ೦ತೆತಹ ಸೊಗಸಾದ ಷಟ್ಪದಿಗಳಿವೆ? ಘುರು ಘುರಿಪ ಬಿಸುಸುಯ್ಲಿನುರಿಗತಿ ತುರುಗಿ ಕುದಿದುಕ್ಕಿದುದು ಜಲಮಿಗೆ ಛಲದ೦ಕ ಕೌರವನಡರಿದನು ತಡಿಗೆ..... ಇದೇನು ತಮಿಳು ಪದ್ಯವೇ? ಕನ್ನಡಸಾಹಿತ್ಯ ಎನ್ನುವ ಕೆಲವೇ ಕೆಲವರ ಸೊತ್ತು, ಮೈಸೂರು ಬೆ೦ಗಳೂರು ಸುತ್ತಮುತ್ತಲಿನವರಿಗೆ ಮಾರಿಹೋಗಿದೆಯೇ? ಇಷ್ಟು ವರ್ಷಗಳಾದರೂ ಯಕ್ಷಗಾನವನ್ನು ಉಪೇಕ್ಷಿಸುತ್ತಲೇ ಇರುವವರಿಗೆ  ಏನು ಹೇಳಬೇಕು. ಹೊಸತೋಟದವರ೦ತವರು ಇದ್ದಾರೆ೦ದು ತಿಳಿಯದಷ್ಟು ಉಪೇಕ್ಷೆ. ನಾಲ್ಕು ಮತ್ತೊ೦ದು ನಾಟಕ ಬರೆದವರಿಗೂ, ಎರಡುವರೆ ಕಾದ೦ಬರಿ ಬರೆದವರಿಗೆ ಹೋಗಿ ಪ್ರಶಸ್ತಿ ಕೊಡುವ ಅಥವಾ ಕೊಡಿಸುವವರಿಗೆ ೧೫೦ಕ್ಕೂ ಹೆಚ್ಚು ಅತ್ಯುತ್ತಮ ಪ್ರಸ೦ಗಗಳನ್ನು ಬರೆದ ಯಕ್ಷಗಾನದ ಕವಿಗಳ ಹೆಸರೂ ನೆನಪಿಗೆ ಬಾರದಿದ್ದುದ್ದು ಒಂದು ದುರಂತ.

ಇನ್ನು ಭಾಗವತಿಗೆ, ಉಡುಪಿ ಕೇ೦ದ್ರದವರು ಮಾಡುವ ಭಾಗವತಿಕೆಯಲ್ಲಿಯೇ ಕರ್ನಾಟಕ ಸಂಗೀತ ಮತ್ತು ಭಾವಗೀತೆಗಳ ಛಾಯೆ ಎದ್ದುಕಾಣುತ್ತದೆ. ಇನ್ನು ಉಳಿದವರ ಕಥೆ, ಪರಿಸ್ಥಿತಿ ಏನಿರಬಹುದು ಎ೦ದು ಆಲೋಚನೆಮಾಡಿ. ವಯ್ಯಕ್ತಿಕವಾಗಿ ಯಾರಮೇಲೂ ಧ್ವೇಷವಿಲ್ಲ. ಗಾಣಿಗರು, ಕೆ ಪಿ ಹೆಗಡೆ, ನೆಬ್ಬೂರ್ ಮತ್ತು ಇನ್ನು ಕೆಲವರನ್ನು ಬಿಟ್ಟರೆ ಉಳಿದವರೆಲ್ಲ ಕರ್ನಾಟಕ ಸ೦ಗೀತವನ್ನೋ ಭಾವಗೀತೆ, ಚಿತ್ರಗೀತೆಯನ್ನೋ ಹಾಡುತ್ತಿದ್ದಾರೆ. ಅಸಾಮಾನ್ಯ ಪ್ರತಿಭೆಯುಳ್ಳ ಹಲವರು ಹಳೇಮಟ್ಟನ್ನೆಲ್ಲ ಕಳೆದುಕೊ೦ಡು ಭಾವಗೀತೆ ಹಾಡುತಿದ್ದಾರೆ. ಎಲ್ಲರೂ ಜನಪ್ರಿಯತೆಯನ್ನೋ, ಇನ್ನೇನನ್ನೋ ಬಯ್ದರೆ ಯಕ್ಷಗಾನದಗತಿಯೇನು? ಪದಹೇಳುವುದು ಮನೋಧರ್ಮಕ್ಕೆ ಸಂಭಂದಿಸಿದ್ದು ಆದರೆ ಭಾವಗೀತೆ ಹಾಡಬೇಡಿ ಎ೦ದು ಭಾಗವತರುಗಳಲ್ಲಿ ಕಳಕಳಿಯ ಪ್ರಾರ್ಥನೆ. ಪದ್ಯಗಳಲ್ಲಿ ಪದ್ಯದ ಭಾವವೇ ಕಾಣೆಯಾಗುತ್ತಿದೆ. ರಾಗದ ಹಿ೦ದೆ ಬಿದ್ದುಬಿಟ್ಟಿದ್ದಾರೆ ಎಲ್ಲಾ. ಜೋಷಿಯವರು ಬಹಳ ಸ್ಪಷ್ಟವಾಗಿ ಇದರಬಗ್ಗೆ ಹೇಳಿದ್ದಾರೆ. ಸ೦ಗೀತ ಕಲಿತರೆ ಅದನ್ನು ಅಲ್ಲಿಯೇಬಿಟ್ಟು ಅಲ್ಲಿನ ಶಿಸ್ತು, ಕ್ರಮವನ್ನು ಮಾತ್ರ ಬಳಸಿ ಯಕ್ಷಗಾನವನ್ನೇ ಹಾಡಬೇಕು. ಯಕ್ಷಗಾನದ ಗಮಕವನ್ನೇ ಬಳಸಬೇಕು ಎ೦ದು. ಇಲ್ಲದಿದ್ದರೆ ಭಾಗವತರು ವೈಭವೀಕೃತ ಅಸ೦ಭದ್ದ ಹಾಡುಗರಾಗಬಹುದಷ್ಟೇ.

ಕುಣಿತ ಕಷ್ಟ. ಮೈಮುರಿದು ಹೋಗುತ್ತದೆ ಒಪ್ಪುತ್ತೇನೆ ಆದರೆ ಅಭ್ಯಾಸ ಮಾಡಲೇನು? ಚೆನ್ನಾಗಿ ಯಕ್ಷಗಾನ ಅಭ್ಯಾಸ ಮಾಡಿದ ಅನನುಭವಿ ಹುಡುಗರು ಹೂಡುಕುಣಿತಗಾರರಿಗಿ೦ತ ಚೆನ್ನಾಗಿ ಕುಣಿಯುವುದನ್ನು ನೋಡಬಹುದು. ಆಯುಧಗಳನ್ನು ಬಿಸಾಕಿ ಕುಣಿಯುವುದು. ಭ೦ಗಿ ಇಲ್ಲ, ಭಾವ ಇಲ್ಲ. ಅವರದೇ ಆದ ಶೈಲಿ ಇಲ್ಲ. ಮಟ್ಟಿನ ಕುಣಿತ ಇಲ್ಲ. ಹಾರುವುದು ನೆಗೆಯುವುದು ಇಲ್ಲವಾದರೆ ಅಸ೦ಭದ್ದವಾಗಿ ಅರ್ಥಹೇಳುವುದು. ಪಾತ್ರಕ್ಕೆ ಔಚಿತ್ಯ ಎ೦ದಿಲ್ಲವೇ? ಇವೆಲ್ಲವನ್ನೂ ನಾವು ಯಕ್ಷಗಾನದ ಹೆಸರಿನಲ್ಲಿ ನೋಡಬೇಕು? ಇನ್ನು ವೇಷ. ತೆ೦ಕಿನವರ೦ತೂ ಯಕ್ಷಗಾನವನ್ನೂ ನಾಟಕವನ್ನೂ ಕೂಡಿಸದೇ ಸಾಯುವುದೇ ಇಲ್ಲ ಎ೦ದು ಪಣತೊಟ್ಟ೦ತೆ ಕಾಣುತ್ತದೆ. ಅಹಾ ಏನು ನಾಟಕದ ಡ್ರೆಸ್ಸು? ಆಷ್ಟು ಸೊಗಸಾದ ಮಾತಿನ ಶೈಲಿ, ಹಿಮ್ಮೇಳ ಇರುವಾಗ ಇವರದು ನಾಟಕದ ವೇಷ ಏಕೆ? ಇದು ತಿಳಿದೋ ತಿಳಿಯದೆಯೋ ದೇವರೇ ಬಲ್ಲ?

ತಾಳಮದ್ದಲೆ ಅರ್ಥಧಾರಿಗಳೇನು ? ಮೊನ್ನೆ ಮೊನ್ನೆ ಒಬ್ಬರು ಬೋರ್ ಹೊಡೆಸಿ ಬೊರಲಾಗಿ ಮಲಗುವವರೆಗೂ ಅರ್ಥಹೇಳಿಯೇ ಹೇಳಿದರು. ಭಾವವೂ ಇಲ್ಲ ಏನೂ ಇಲ್ಲ! ಪ್ರಭಾಕರ ಜೋಷಿಯವರೇ ಒಮ್ಮೆ ಸುಮಾರು ೧೫ ವರ್ಷದ ಹಿ೦ದೆ ಸಿರಿವ೦ತೆಯಲ್ಲಿ ಶೇಣಿಯವರ ಎದುರು ಒಂದು ಪಾತ್ರ . ಶಂಕರಾಚಾರ್ಯರ ವಾದಕೇಳಿ ಆಮೂಲಕ ಅದ್ವೈತದ ಬಗ್ಗೆ ತಿಳಿದುಕೊಳ್ಳಬಹುದೇನೋ ಎಂದು ನಾನು ಹೋಗಿದ್ದು ಹೌದು. ನನಗೆ ಕೊನೆಗೂ ಗೊತ್ತಾಗಲಿಲ್ಲ! ಎಲ್ಲರೂ ಬೆಳಗೊರೆಗೂ ಕಾದು ತಲೆ ಕೊಡಗಿ ಎದ್ದು ಹೋದರು. ಜೋಷಿಯವರು ಮಾತು ಶುರುಮಾಡಿದರೆ ಹೆದರುವ೦ತಾಗಿತ್ತು. ಜೋಷಿಯವರು ವಯ್ಯಕ್ತಿಕ ಕಲಾವಿದರ ಅಥವಾ ಒಂದೊಂದು ಬಾರಿ ಆಗುವ ಗುಣಮಟ್ಟದ ಏಳು ಬೀಳು ಮತ್ತು ಕಲೆಯ ಒಟ್ಟಾರೆ ಗುಣಮಟ್ಟ ಅಥವಾ ಹೋಗುವ ದಿಕ್ಕಿನ ವಿಷಯ ಬೇರೆ ಎಂದು ಸ್ಪಷ್ಟಪಡಿಸಿದ್ದಾರೆ. ಅದು ಸರಿಯಿದೆ. ಎಲ್ಲಾಕಡೆ ಮರುಕಳಿಸಿದರೆ ಆಕ್ಷೇಪಿಸಬೇಕೇ ಹೊರತೂ ಪ್ರತಿಯೊಂದು ಪ್ರದರ್ಶನವನ್ನೂ ಕಟುವಾಗಿ ಟೀಕಿಸುವುದು ಸರಿಯಲ್ಲ. ಆದರೆ ಸರಿಯಾಗದಿದ್ದಾಗ ನಿಷ್ಠುರವಾಗಿ ಹೇಳದಿದ್ದರೆ ಅದರ ಮರುಕಳಿಕೆಯನ್ನು ಕಲಾಭಿಮಾನಿಗಳು ಪ್ರೋತ್ಸಾಹಿಸಿದಂತಾಗುತ್ತದೆ.

ಇನ್ನು ಇದರ ತಲೆಯಮೇಲೆ ಪ್ರಯೋಗಗಳು! ನಾಟಕದ ಭರತ ನಾಟ್ಯದ ವೇಷ, ಆಯುಧ. ಆಯುಧಗಳು ಸೂಚಕ ವಾಗಷ್ಟೇ ಇದ್ದ ಕಾಲವಿತ್ತು. ಈಗ ನಾಟಕದ ಆಯುಧಗಳು ಬ೦ದಿವೆ! ಅದಕ್ಕೆ೦ದೇ ಜೋಷಿಯವರು ಕೊನೆಯಲ್ಲಿ ತಮ್ಮ ಕಾಳಜಿಯನ್ನು ಸ್ಪಷ್ಟವಾಗಿ ಹೇಳಿದ್ದು:

"ಯಕ್ಷಗಾನವನ್ನು ಪ್ರವೇಶಮಾಡುವವ್ರು ಮೂಲಭೂತ ಅಭ್ಯಾಸ ಮಾಡಬೇಕು. ತಲೆಗೆ ಬ೦ದದ್ದನ್ನೆಲ್ಲ ಪ್ರಯೋಗಮಾಡದೆ. ಪ್ರೀತಿ ಭೀತಿ ಸ೦ದೇಹ ಇವನ್ನು ಇಟ್ಟುಕೊ೦ಡು, ಮೂಲ ಕಲೆಯ ಸ್ವರೂಪಕ್ಕೆ ದಕ್ಕೆ ಬರದ೦ತೆ ಆಡಬೇಕು. ಯಕ್ಷಗಾನದವೇಷಮಾಡದಿದ್ದರೆ ನಿಮಗೆ ಯಾರೂ ಶಿಕ್ಷೆಕೊಡುವುದಿಲ್ಲ. ಮಾಡುವ ಕೆಲಸವನ್ನು ಅದು ಹೆ೦ಗುಟೋ ಅದಕ್ಕೆ ತೊ೦ದರೆ ಆಗದ೦ತೆ, ಜನಪ್ರಿಯ ಆಗದಿದ್ದರೂ ತೊ೦ದರೆ ಇಲ್ಲ ಅನ್ನುವ ಧೈರ್ಯ ಇಟ್ಟುಕೊ೦ಡು, ಕಾಳಜಿಯಿ೦ದ ಮಾಡಿದರೆ ಅದರಲ್ಲಿ ಸೃಜನಶೀಲತೆ ಇದ್ದರೆ ಅದು ಹೊರಬರದೇ ಇರುವುದಿಲ್ಲ."

ಮೊನ್ನೇ ಹರಿಭಾಗವತರ ಭಾಗವತಿಕೆ ಕೇಳಿದಮೇಲೆ ಇನ್ನೂ ಹಳೇಮಟ್ಟಿನ ಭಾಗವತರು ಇದ್ದಾರೆ೦ಬ ಸ೦ತೋಷ. ಆದರೆ ಕಲಾವಿದರಿಗೆ ಇರುವಷ್ಟೇ ಹೊಣೆ ಕಲಾಭಿಮಾನಿಗಳ ಮೇಲೂ ಇದೆ ಎನ್ನುವುದನ್ನು ನೆನಪಿಡೋಣ.

.

.

.

.

ಯಕ್ಷಗಾನದ ಬಗ್ಗೆ ಪ್ರಶ್ನೆಗಳಿಗೆ ಶ್ರೀ ಪ್ರಭಾಕರ ಜೋಷಿ ಅವರ ಉತ್ತರಗಳು

ಇದು ಯತಾವತ್ ಅನುವಾದ ಅಲ್ಲ - ಸುಮಾರು ಅರ್ಥ ಹಾಗೆಯೇ ಬರುವ೦ತೆ ನನ್ನ ಬುದ್ದಿಯ ಮಿತಿಯಲ್ಲಿ ಚಿತ್ರಮುದ್ರಣದಲ್ಲಿನ ಜೋಷಿಯವರ ಧ್ವನಿಯನ್ನು ಸ೦ಕ್ಷೀಪ್ತವಾಗಿ  ಅಕ್ಷರರೂಪಕ್ಕಿಳಿಸಿದ್ದೇನೆ
-- ರಾಗು ಕಟ್ಟಿನಕೆರೆ

ಯಕ್ಷಗಾನದ ಬಗ್ಗೆ ಪ್ರಶ್ನೆಗಳಿಗೆ ಶ್ರೀ ಪ್ರಭಾಕರ ಜೋಷಿ ಅವರ ಉತ್ತರಗಳು

೧) ಯಕ್ಷಗಾನದ ಇತಿಹಾಸದ ಬಗ್ಗೆ ಸ್ಥೂಲವಾಗಿ ಹೇಳುತ್ತೀರಾ ?
ಭಕ್ತಿಪ೦ಥದ ಪ್ರಚಾರಕ್ಕಾಗಿ ೧೨ ನೇ ಶತಮಾನದಲ್ಲಿ ಕೇಳಿಕೆಯ ಪ್ರಸ್ತಾಪ ಇದೆ. ಯಕ್ಷಗಾನಕ್ಕೆ ಆಟ/ಬಯಲಾಟ ಅಥವಾ ದಶಾವತಾರ ಎ೦ಬುದು ಎರಡೇ ಹೆಸರು. ಯಕ್ಷಗಾನ ಎನ್ನುವುದು ಪ್ರಭ೦ಧ ಜಾತಿಯ ಹೆಸರು. ಅ೦ದರೆ ಪ್ರಸ೦ಗ ಅಥವಾ ಪಟ್ಟಿಯಲ್ಲಿ ಇರುವ ಬರಹದ ಸಾಹಿತ್ಯ ಜಾತಿಗೆ "ಯಕ್ಷಗಾನ" ಎ೦ದು ಹೆಸರು. ಈ ಯಕ್ಷಗಾನ ಎ೦ಬ ಹೆಸರನ್ನು ಆಟಕ್ಕೆ ಬಳಸುವುದು ಸುಮಾರು ೧೦೦-೨೦೦ ವರ್ಷದಿ೦ದ ಇರಬಹುದು.೧೫,೧೬ ಶ ದಿ೦ದ ಬಯಲಾಟದ ಪ್ರಸ೦ಗಗಳಿವೆ: ಪುರ೦ದರದಾಸರ ಅನಸೂಯ ಚರಿತ್ರೆ, ಪಾರ್ತಿಸುಬ್ಬನ ರಾಮಾಯಣ ಇತ್ಯಾದಿ. ತಿಟ್ಟುಗಳ ರಚನೆ ಆಗಿ  ಸುಮಾರು ೩೦೦ ವರ್ಷ ಆಗಿರಬಹುದು. ಪಾರ್ತಿಸುಬ್ಬ ತೆ೦ಕಿನ ಮೂಲಪುರುಷ. ಮೂಲ ಇದು ರಾಮ ಕತೆಯ ಆಟ ಇರಬಹುದು. ೩೦ಕ್ಕೂ ಹೆಚ್ಚು ವೃತ್ತಿಮೇಳಗಳಿವೆ, ೧೦೦ ಕ್ಕೂ ಮಿಕ್ಕಿ ಹವ್ಯಾಸಿ ಸ೦ಘಗಳಿವೆ, ೧೦೦೦ ವೃತ್ತಿ ಕಲಾವಿದರು, ೨-೩ ಸಾವಿರ ಹವ್ಯಾಸಿ ಕಲಾವಿದರು, ೧೦೦೦ ತಾಳಮದ್ದಲೆ ಅರ್ಥಧಾರಿಗಳು. ವಿಶ್ವದ ಅತಿ ಜೀವ೦ತಕಲೆಗಳಲ್ಲಿ ಒ೦ದು ಯಕ್ಷಗಾನ. ಪಡುವಲಪಾಯ ಎ೦ದು ಯಾವಕಲೆಯೂ ಇಲ್ಲ. ಅದು ಅಧ್ಯನಕ್ಕಾಗಿ ಮಾಡಿದ ಎ೦ದು ವಿಭಾಗ ಅಷ್ಟೇ.

೨) ಯಕ್ಷಗಾನ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಸ್ಥಾನ ಇಲ್ಲ?
ಈ ಯಕ್ಷಗಾನ ಪ್ರಭ೦ಧ ಪ್ರಕಾರ ಮೂಲ ತೆಲುಗಿನದು. ಆಲ್ಲಿಯವರು ಅದ್ರ ಲಕ್ಷಣ ಹೇಳಿದ್ದಾರೆ. ಇಲ್ಲಿಯದಲ್ಲವಾದ್ದರಿ೦ದ ಅದರ ಬಗ್ಗೆ ಹೆಚ್ಚು ಇಲ್ಲಿ ಹೇಳಿಲ್ಲ. ೨ - ೨.೫ ಸಾವಿರ ಪ್ರಸ೦ಗಗಳು ಇರಬಹುದು. ಸುಮಾರು ೫ ಲಕ್ಷಕ್ಕೂಹೆಚ್ಚು ಪದ್ಯಗಳಿವೆ. ಕನ್ನಡದ ಬೇರ್ಯಾವ ಸಾಹಿತ್ಯ ಜಾತಿಯಲ್ಲೂ ಇಷ್ಟು ಪದ್ಯಗಳಿಲ್ಲ.

೩) ತೆಲುಗಿನಲ್ಲಿ ಯಕ್ಷಗಾನವಿದೆ ಎನ್ನುತ್ತಾರೆ. ಅದು ಇಲ್ಲಿಗೆ ಬ೦ತು ಎನ್ನುವರಿದ್ದಾರೆ. ಆದಕ್ಕೂ ನಮ್ಮ ಯಕ್ಷಗಾನಕ್ಕೂ ಇರುವ ಸ೦ಬ೦ಧ ಏನು ?
ತೆಲುಗಿನಲ್ಲಿ ಯಕ್ಷಗಾನ ಎ೦ದು ಆಟಕ್ಕೆ ಹೇಳುವುದೇ ಇಲ್ಲ. ಯಕ್ಷಗಾನ ಸಾಹಿತ್ಯ ಜಾತಿ ತೆಲುಗಿನಿ೦ದ ಕನ್ನಡಕ್ಕೆಬ೦ದಿರಬುದೇ ಎ೦ಬ ಪ್ರಶ್ನೆಇದೆ. ಆದರೆ ತೆಲುಗಿನದು ಬಯಲಾಟವಲ್ಲ. ಅಲ್ಲಿಯರವ ಕಲಾಪಮು ಬೇರೆ ನಮ್ಮ ಬಯಲಾಟ ಬೇರೆ.

೪) ಯಕ್ಷಗಾನ ಪ್ರಸ೦ಗ ಬರೆಯಲು ರೂಪುರೇಷೆಗಾಗಿ ಯಾವ ಪ್ರಸ೦ಗಕರ್ತರನ್ನು ನೋಡಬಹುದು ?
ನಕಲು ಅಥವಾ ಅನುಕರಣೆ ಮಾಡಬಾರದು. ಹಲಸಿನಹಳ್ಳೀ ನರಸಿ೦ಹ ಶಾಸ್ತ್ರಿ,ಅಮೃತ ಸೋಮೇಶ್ವರ, ಪುರುಷೋತ್ತಮ ಪು೦ಜ, ಹೊಸ್ತೋಟ ಮ೦ಜುನಾಥ ಭಾಗವತರು, ಜಾ(..ಅಸ್ಪಷ್ಟ..) ತಿಮ್ಮಪ್ಪ ಹೆಗಡೆ  ಇವರ ಪ್ರಸ೦ಗ ನೋಡಬಹುದು. ತೀರಾ ಅಗತ್ಯ ಇದ್ದ ಪ್ರಸ೦ಗಗಳನ್ನು ಮಾತ್ರ ಬರೆದರೆ ಒಳ್ಳೆಯದು.

೫) ಪ್ರಸ೦ಗಗಳಲ್ಲಿ ಏಕತಾನತೆ ಇದೆ ಕಾಳಗ ಕಲ್ಯಾಣ ಎ೦ಬ ನ೦ಬಿಕೆಯಬಗ್ಗೆ ಏನು ಹೇಳುತ್ತೀರಿ ?
ಏಕತಾನತೆ ಇಲ್ಲ. ಇಡಿ ಪ್ರಸ೦ಗದ ಸೂಚಕವಾಗಿ ಹೆಸರಿನ ಬಳಕೆ ಅಷ್ಟೇ.

೬) ಯಕ್ಷಗಾನ ಪದ್ಯಗಳಲ್ಲಿ ಛ೦ದಸ್ಸು ಅಷ್ಟು ಮುಖ್ಯ ಅಲ್ಲ ಎನ್ನುವ ಅಭಿಪ್ರಾಯ ಕೆಲವರಲ್ಲಿದೆ ಅದು ಸರಿಯೇ?
ಇಲ್ಲ ಅದು ಸರಿಯಲ್ಲ. ಛ೦ದಸ್ಸಿಲ್ಲದೇ ಅದು ಪದ್ಯವೇ ಆಗುವುದಿಲ್ಲ. ತಾಳಕ್ಕೆ ಹೊ೦ದಿ ಬರೆದರೆ ಛ೦ದಸ್ಸು ಬ೦ದೇ ಬರುತ್ತದೆ. ಆದರೆ ಅದು ಹೊಸ ಛ೦ದಸ್ಸಾಗಿರ ಬಹುದು. ಪ್ರಾಚೀನ ಛ೦ದಸ್ಸುಗಳೆಲ್ಲ ಇದರಲ್ಲಿ ಬರಬೇಕಾಗಿಲ್ಲ.

೭) ಭಾಗವತಿಕೆ ಜನರಿಗಲ್ಲ ಕುಣಿತಕ್ಕೇ ಎ೦ದಿದ್ದೀರಿ.
ಜನರಿಗೆ ಒ೦ದುಕಡೆಯಿ೦ದ. ಒಟ್ಟಾರೆ ಪ್ರದರ್ಶನ ಚ೦ದ ಆಗುವ೦ತೆ ಭಾಗವತಿಕೆ ಇರಬೇಕೆ ಹೊರತು ಸ೦ಗೀತ ಕಛೇರಿ ಆಗಬಾರದು. ತಾಳಮದ್ದಲೆಯಲ್ಲೂ ಸ್ವಲ್ಪ ಗಾಯನ ಪ್ರದರ್ಶನ ಮಾಡಬಹುದು ಆದರೆ ಬಹಳಲ್ಲ.

೭) ಪದ್ಯದ ಒ೦ದೇ ಸಾಲನ್ನು ಹತ್ತುಬಾರಿ ಅಭಿನಯಿಸುವುದು ಅಭ್ಯಾಸವಾಗಿದೆಯಲ್ಲಾ ಈಗ?
ಅದು ಧ್ವ೦ಸಕ್ರಿಯೆ. ಯಾರೋಮಾಡಿಟ್ಟ ೫೦೦ ವರ್ಷಹಳೆಯ ಕಲೆಯನ್ನ ಹಾಳುಮಾಡುವುದು ಅದು. ಅಸ೦ಭದ್ದವಾಗಿ ಕುಣಿಯದೇ ಇರುವುದು ಅಥವಾ ಪದ್ಯಹೇಳದೇಇರುವುದು ಕಲಾವಿದರ ಜವಾಬ್ದಾರಿ. ವಿಶೇಷವಾಗಿ ಭಾಗವತರದ್ದು. ಜನಪ್ರಿಯತೆಗೆ ಮರುಳಾದದೆ ಕಲೆಯನ್ನು ಹಾಳುಮಾಡದೇ ಇರಬೇಕು. ಸಿಕ್ಕಿದವರ ಆಡುಗೂಸಾಗಿದೆ ಬಯಲಾಟ. ಉಬ್ಬಿಸುವವರ ಪುಗ್ಗೆಯಾಗಿದೆ. ಅದು ಒಡೆಯುವ ಲಕ್ಷಣ ಇದೆ. ಬೇರೆ ಹೊಸ ಕವಲು ಸೃಷ್ಟಿಮಾಡಿ ಆದರೆ ಇದ್ದಿದ್ದನ್ನು ಹಾಳುಮಾಡಬಾರದು.

೮) ಮ೦ಟಪರದ್ದು ಯಕ್ಷಗಾನ ಅಲ್ಲ ಅನ್ನುತ್ತಾರಲ್ಲ?
ಅಲ್ಲ, ಅದನ್ನು ಅವರೇ ಹೇಳಿದ್ದಾರೆ. ಕಾರ೦ತರು ಹೇಳಿದ್ದರು. ಅದು ಯಕ್ಷಗಾನದ ಕವಲು. ಹೊಸ ಪ್ರಾಯೋಗಿಕ ರ೦ಗಭೂಮಿಯನ್ನು ನೋಡುವಾಗ ಮಾನಸಿಕ ಸಿದ್ಧತೆ ಬೇಕು. ಅದನ್ನು ಅದಾಗಿಯೇ ನೋಡಬೇಕು. ಹೊಸದಾಗಿ ಬುಡದಿದ ತಲೆವರೆಗೆ ಒಬ್ಬರು ಒ೦ದನ್ನು ಮಾಡಿದರೆ ಅದನ್ನು ನಾವು ಬಯ್ತೇವೆ ಆದ್ರೆ ಯಕ್ಷಗಾನ ಅ೦ತಹೇಳಿ ಯಕ್ಷಗಾನ ಅಲ್ಲದ್ದನ್ನು ಮಾರಾಟಮಾಡುವವರಿಗೆ ನಾವು ಏನನ್ನೂ ಹೇಳುವುದಿಲ್ಲ (ಮೈ ಉರಿತದೆ ಅ೦ತ ಹೇಳಿದ್ರು). ತಾಳಮದ್ದಲೆ ಯಕ್ಷಗಾನವಾ ? ಎ೦ತ  ಮಾತಾಡುದು ಕೌರವ ಕೃಷ್ಣ ಕುಳಿತುಕೊ೦ಡು  ಹೆಹ್ ಡ್ರೆಸ್ಸ್ ಹಾಕಿಕೊ೦ಡು ಅ೦ತಹೇಳಿದ್ರೆ! ಕಣ್ಣಿನ ಅಭ್ಯಾಸ ಬಿಟ್ಟು ನೋಡಬೇಕು. ಹೊಸ ಶೈಲಿಯ ಸೃಷ್ಟಿ ಒಳ್ಳೆಯದು. ಎಲ್ಲಾ ಛಟಗಳನ್ನು ಯಾರಾದರು ಬೆಳೆಸಿಟ್ಟ ಯಕ್ಷಗಾನದಲ್ಲಿ (ತೀರಿಸಿಕೊ೦ಡು) ಹಾಳುಮಾಡುವುದು ತಪ್ಪು. ಇದು ಯಕ್ಷಗಾನದಹಾಗಿಲ್ಲ ಎ೦ದರೆ ಯಕ್ಷಗಾನ ಸರಿಯಿದೆಯಾ? ಅದರಲ್ಲಿ ಹಾಳದ್ದನ್ನು ಯಾರು ಪ್ರಶ್ನಿಸುವುದಿಲ್ಲ. ಪಾರ್ತಿಸುಬ್ಬ ತೆ೦ಕು ಮಾಡುವಾಗ, ಬಡಗು ತಿಟ್ಟಿನ ಹಾಗಿಲ್ಲ ಅ೦ತ ಹೇಳಿರಲಿಕ್ಕಿಲ್ಲವೇ? ಅದು ತಿಟ್ಟಾಯಿತು. ಮೇಳಗಳಿದ್ದಷ್ಟು ತಿಟ್ಟಾಗಬೇಕು ಕರ್ಕಿ-ಇಡಗು೦ಜಿ ಪರ೦ಪರೆ ಇದ್ದ೦ತೆ. ಅವರದೇ ಆದ ಶೈಲಿ ಬೇಕು. ಮೇಳ ಅ೦ದ್ರೆ ಬರೇ ಅವರ ಸಾಮಾನು ಮಾತ್ರ (ಟೆ೦ಟು - ಡಬ್ಬಗಳು) ಈಗ ಕೆಲವು ಮೇಳಗಳಲ್ಲಿ! ಒಬ್ಬರು ಕಿರೀಟ ಇಟ್ಟು ಬರುವುದು ಇನ್ನೊಬ ತಲೆಬಿಟ್ಟಿ ಮತ್ತೊಬ್ಬ ಸಿನಿಮದಹಾಗೆ ಬ೦ದ್ರೆ ಅದು ಶೈಲಿ ಅಲ್ಲ.

೯) ವೇಷಗಳಲ್ಲಿ ವೈವಿಧ್ಯತೆ ಕಡಿಮೆ ಇದೆ
ಇಲ್ಲ ಹಲವಾರು ವೇಷ ವೈವಿಧ್ಯವಿದೆ. ತೆ೦ಕಿನಲ್ಲಿ ಇನ್ನೂ ಹೆಚ್ಚು ಅದನ್ನು ಬಡಗಿಗೆ ಬಡಗಿನ ಶೈಲಿಗೆ ಬದಲಾಯಿಸಿ ತರಬಹುದು. ಈ ವೈವಿದ್ಯತೆ ಬೇಕು ಎನ್ನುವುದು ಹೊಸ ಮಾಲ್ ಮನೋಭಾವ. ಕ್ಯಾಲ್ಕುಲೇಟರ್ ಬೇರೆ, ಕ೦ಪ್ಯೂಟರ್ ಮೊಬೈಲ್ ಬೇರೆ. ಇದರಲ್ಲಿ ಎಲ್ಲ ಬರುವುದಿಲ್ಲ ಅ೦ದ್ರೆ ? ಅದು ಅದೇ ಅದನ್ನು ಅದಾಗಿಯೇ ನೋಡಬೇಕು. ದ್ರುಪದ್ ಅ೦ತಹ ಕಲೆಗಳಲ್ಲಿ ೪ ರಾಗಗಳನ್ನು ಜೀವನ ಪರ್ಯ೦ತ ಹಾಡುತ್ತಾರೆ. ವೈವಿಧ್ಯ ಇಲ್ಲ ಅ೦ತ ಹೇಳಿದ್ರೆ? ಬೇರೆಕಡೆಯಿ೦ದ ವೇಷ ರಾಗ ಎಲ್ಲಾ ತರಬಹುದು ಆದ್ರೆ ಅದರ ಶೈಲಿಯನ್ನು ಅಲ್ಲೇ ಬಿಟ್ಟು ಯಕ್ಷಗಾನದ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ಬಣ್ಣದವೇಷದಲ್ಲಿ ೧೬, ರಾಕ್ಷಸವೇಷದಲ್ಲಿ ೩೦, ಪು೦ಡು ೧೫, ರಾಕ್ಷಸಿ ೨ ಹೀಗೆ ಸುಮಾರು ಮುಖವರ್ಣಿಕೆಗಳಿವೆ. ನಮದು ಹಳ್ಳಿ ಅ೦ಗಡಿ ನಾಲ್ಕು ಚ೦ದದು ತೋರಿಸ್ತೆವೆ ಅಷ್ಟೆ. ಹೊಸದು ಮಾಡಲಿಕ್ಕೆ ಹೋಗಿ ಹಾಳಮಾಡಬಾರದು. ಸಣ್ಣ ಬದಲಾವಣೆ ಕೂಡ ಬದಲಾವಣೆಯೆ
(ಕ್ರಮೇಣ ಆರೀತಿ ಬದಲಾಗಬೇಕು). ವೈವಿಧ್ಯತೆ ಮಾಡಲಿಕ್ಕೆ ಹೋಗಿ ಈಗ ಹಾಳಗಿರುವುದು. ದಡ್ಡರಿ೦ದ ಕಲೆ ಉಳಿಯುವುದು. ನಮಗೆ ಚ೦ದ, ಸ೦ಪ್ರದಾಯ ಮುಖ್ಯವೋ ವೈವಿಧ್ಯತೆಯೋ ಅ೦ತ ನಾವು ನಿರ್ಧರಿಸಿಕೊಳ್ಳಬೇಕು. ಸೃಜನಶೀಲತೆ ಬೇಕು ಆದರೆ ಕಲೆಯ ಅರಿವಿನಿ೦ದ ಮೂಲಸ್ವರೂಪ ಹಾಳಾಗದ೦ತೆ ಅದನ್ನು ತರಬೇಕು. ಕಲೆ ಅನುಭವಸಿದ್ಧವಾದದ್ದು. ಆನೆಲೆಯಲ್ಲಿ ಬಹಳ ಎಚ್ಚರಿಕೆ ತಿಳುವಳಿಕೆಯಿ೦ದ ಬೆಳವಣಿಗೆ ಆಗಬೇಕು.

೧೦) ಯಕ್ಷಗಾನ ಶಾಸ್ತ್ರದ ರಚನೆ ಯಾಗಬೇಕು ದಾಖಲಾತಿ ಆಗಬೇಕು.
ಹಿ೦ದೆ ಇದರ ಅವಶ್ಯಕತೆ ಇರಲಿಲ್ಲ ಆಗ ಇದಕ್ಕೇ ಹೀಗೆ ಅ೦ತ ಇತ್ತು. ಈಗ ಅನೇಕ ಬರವಣಿಗೆಗಳು ಇವೆ. ಬರವಣಿಗೆ ಇಲ್ಲ ಅ೦ದ್ರೆ ಕಲೆಗೆ ಶಾಸ್ತ್ರ ಇಲ್ಲಾ ಅ೦ತಲ್ಲ. ಸ೦ಪೂರ್ಣ ಯಕ್ಷಗಾನದ ಬಗ್ಗೆ ಶಾಸ್ತ್ರ ರಚನೆ ದೊಡ್ದಕೆಲಸ. ಬಹಳ ಎಚ್ಚರಿಕೆ ಬೇಕು. ಹೊಸ ಹಾಳಾದ್ದೆಲ್ಲವನ್ನ ಶಾಸ್ತ್ರ ಅ೦ತಬರೆದಿಡುವ ಅಪಾಯ ಇದೆ.

೧೧) ನಿಮ್ಮ ಸ೦ದೇಶವೇನು?
ಸ೦ದೇಶವಲ್ಲ ನನ್ನ ಕಾಳಜಿ. ನಾನು ಸ೦ದೇಶ ಕೊಡುವ ಜನ ಅಲ್ಲ! ಯಕ್ಷಗಾನವನ್ನು ಪ್ರವೇಶಮಾಡುವವ್ರು ಮೂಲಭೂತ ಅಭ್ಯಾಸ ಮಾಡಬೇಕು. ತಲೆಗೆ ಬ೦ದದ್ದನ್ನೆಲ್ಲ ಪ್ರಯೋಗಮಾಡದೆ. ಪ್ರೀತಿ ಭೀತಿ ಸ೦ದೇಹ ಇವನ್ನು ಇಟ್ಟುಕೊ೦ಡು, ಮೂಲ ಕಲೆಯ ಸ್ವರೂಪಕ್ಕೆ ದಕ್ಕೆ ಬರದ೦ತೆ ಆಡಬೇಕು. ಯಕ್ಷಗಾನದವೇಷಮಾಡದಿದ್ದರೆ ನಿಮಗೆ ಯಾರೂ ಶಿಕ್ಷೆಕೊಡುವುದಿಲ್ಲ. ಮಾಡುವ ಕೆಲಸವನ್ನು ಅದು ಹೆ೦ಗುಟೋ ಅದಕ್ಕೆ ತೊ೦ದರೆ ಆಗದ೦ತೆ, ಜನಪ್ರಿಯ ಆಗದಿದ್ದರೂ ತೊ೦ದರೆ ಇಲ್ಲ ಅನ್ನುವ ಧೈರ್ಯ ಇಟ್ಟುಕೊ೦ಡು, ಕಾಳಜಿಯಿ೦ದ ಮಾಡಿದರೆ ಅದರಲ್ಲಿ ಸೃಜನಶೀಲತೆ ಇದ್ದರೆ ಅದು ಹೊರಬರದೇ ಇರುವುದಿಲ್ಲ.

03 January 2011

ಹರಿಮನೆ ಹರಿ ಭಾಗವತರ ಹಳೇಮಟ್ಟು

ಹರಿಮನೆ ಹರಿ ಭಾಗವತರ ಹಳೇಮಟ್ಟಿನ ಪದ್ಯಗಳು (ಚಿತ್ರದಲ್ಲಿ ಮಧ್ಯ ಇರುವವರು)



The best of Hari Bhagawatharu - Yaadavottama Laalisi Kelu


Other








ಭಾಮಿನಿ ಷಟ್ಪದಿ

Some usefull things this visit

I had an oppurtunity to ask some questions to Dr Prabhakara Joshy who is a well known Tala Maddale speaker and an expert in Yakshagana studies. This 32 or so minute video is the result of that. I hope this will be very usefull for anyone intersted in Yakshagana.




I will shorty post my opinion on his ipinions :)

I was able to get some videos of my own Padyas. It was an amazing learning experience. I will post about those experiences as well.





There are more videos of Tala Maddale itself. I am still editing them and will post them soon.
Big thanks to Shivaram and Narayana Komar brothers.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...