ಭಸ್ಮಾಸುವ ಮೋಹಿನಿಯಲ್ಲಿ - ಎಲ್ಲೆಲ್ಲೂ ಸೊಬಗಿದೆ ಬೇಕೆ ಎಂಬ ಗೋಪಾಲಕೃಷ್ಣ ಭಾಗವತರ ಲೇಖನಕ್ಕೆ ಪ್ರತಿಕ್ರಿಯೆ.
https://www.facebook.com/yaksharangadamatugalu/posts/917928364961881:0
ಇಲ್ಲಿ ಹಲವಾರು ವಿಚಾರ ಪ್ರಸ್ತಾಪಿಸಿದ್ದೀರಿ. ತುಂಬಾ ಉಪಯುಕ್ತ ಮಾಹಿತಿ ಮತ್ತು ಹೊಸ ವಿಚಾರವುಳ್ಳ ಲೇಖನ. ತುಂಬಾ ಧನ್ಯವಾದಗಳು. ಹಳೆಗನ್ನಡ ಮತ್ತು ನಡುಗನ್ನಡ ಬಳಸುವ ಯಕ್ಷಗಾನಕ್ಕೆ ಹೊಸಕನ್ನಡ ಬಂದಾಗ ಹೊಸ ಪ್ರತಿಮೆ ಬಂದಾಗ ಪದ ಹೇಳುವುದೂ ಹೊಸತರವಾಗ ಬೇಕಾಗುತ್ತದೆ ಎನ್ನುವುದು ಸರಿ ಯೆನಿಸುತ್ತದೆ. ಪ್ರತಿಮೆ ಎಂದರೆ imagery-ಭಾವ ಚಿತ್ರಣ ಎಂದು ಬಗೆದರೆ ಅದು ಹೆಚ್ಚಾಗಿ ಆಂಗ್ಲಮೂಲದ್ದು ಆಗಿರಬೇಕು. ಆದರೂ ಹಾಡು ಹೊಸ ಭಾವಗೀತೆಯ ಧಾಟಿಗೆ ಇಳಿಯುವುದಕ್ಕೆ ಹೊಸಕನ್ನಡ ಉಪಯೋಗಿಸುವಾಗ ಮತ್ತು ಛಿತ್ರಣ ಪ್ರಧಾನವಾಗಿ ಪದ ಬರೆಯುವಾಗ ಅನಿವಾರ್ಯವಾಗಿ ಛಂದಸ್ಸಿನಲ್ಲಿ ಆಗುವ ಬದಲಾವಣೆಯೇ ಮುಖ್ಯ ಕಾರಣ ಅನಿಸುತ್ತದೆ.
ಎಲ್ಲೆಲ್ಲು ಸೊಬಗಿದೆ ಹಿಂದಿ ಭಾಷೆಯ - ಗೋರಿ ತೆರ ಗಾಂವ್ ಬಡಾ ಪ್ಯಾರ ಕ್ಕೆ ಸಮೀಪವಿದೆ ಹಾಗಾಗಿ ಈ ನಮ್ಮ ಪದಕ್ಕೂ ಯಾವುದೋ ಪ್ರಾಂತ್ಯದ ಜಾನಪದಗೀತೆ ಮೂಲವಿರಬಹುದು. ಈ ಮಟ್ಟಿನ ಯಾವಪದವೂ ಯಕ್ಷಗಾನದಲ್ಲಿ ಮೊದಲು ಇದ್ದಂತೆ ತೋರಲಿಲ್ಲ (ಇದ್ದರೆ ತಿಳಿಸಿ). ಹಾಗಾಗಿ ಇದು ನಮ್ಮ ತಾಳ ವ್ಯವಸ್ತೆಗೆ ಪೂರ್ಣ ಸರಿಯಾಗಿ ಹೊಂದುತ್ತದೆಯೆ ಎಂದು ನಿಖರವಾಗಿ ಶಾಸ್ರ್ತಜ್ನರು ಅಧ್ಯಯನ ಮಾಡುವ ಅವಶ್ಯಕತೆ ಇದೆ. ಇದು ಮುಖ್ಯ ಏಕೆಂದರೆ,
ಎಲ್ಲಿಯವರೆಗೆ ಯಕ್ಷಗಾನದ ತಾಳಗಳು ಕೆಡುವುದಿಲ್ಲವೋ ಲುಪ್ತವಾಗುವುದಿಲ್ಲವೋ ಅಲ್ಲಿಯವರೆಗೆ ಯಕ್ಷಗಾನ ಉಳಿಯುತ್ತದೆ. ಹಳೆಯ ಪದ್ಯ ಮತ್ತು ತಾಳ ಇವೆರಡರಿಂದಲೇ ಉಳಿದ ಹಿಮ್ಮೇಳದ ವಿವರಗಳ ಪುನಸೃಷ್ಟಿ ಸುಮಾರಾಗಿ ಮಾಡಬಹುದು. ಆದರೆ ಪದ್ಯ ಹಾಳಾದರೆ ಅದು ತಾಳ ಹಾಳುಮಾಡಿ ಯಕ್ಷಗಾನವನ್ನೇ ಕೊಲ್ಲುತ್ತದೆ ಎನ್ನುವುದರಲ್ಲಿ ನನಗೆ ಅನುಮಾನವಿಲ್ಲ.
ಇನ್ನು ಹೊಸ ಪದಸೇರಿಸುವುದರ ಬಗ್ಗೆ: ಯಕ್ಷಗಾನ ಕಥಾಪ್ರಧಾನವೇ ಹೊರತು ನಾಯಕ ಪ್ರಧಾನವಲ್ಲ. ಈ ಪ್ರಮುಖ ವೇಷಗಳು ಪದ ಸೇರಿಸಿದ್ದೆಲ್ಲ ಸುಮಾರಾಗಿ ಕಥೆಯನ್ನು ನಾಯಕ ಪ್ರಧಾನ ಮಾಡುವುದಕ್ಕೆ ಎಂದು ತೋರುತ್ತದೆ. ಈಗ ನಾಯಕ ಪ್ರಧಾನ ಸ್ವಶಕ್ತಿ ಪ್ರದರ್ಶನ ಸರ್ವೇ ಸಾಮಾನ್ಯವಾಗಿರುವುದು ಅದಕ್ಕೆ ಪುಷ್ಟಿಯನ್ನು ಒದಗಿಸುತ್ತದೆ. ಆಡುವ ಆಟದಲ್ಲಿ ಪ್ರವೇಶ ನಿರ್ಗಮನ ಬದಲಾಯಿಸುವ ಹೊಡೆತದಲ್ಲಿ ಪ್ರಸಂಗವೇ ಕಥಾನಾಯಕ ಪ್ರಧಾನವಾಗಿ ಬದಲಾಗುತ್ತಿದೆ. ಮೊದಲಿಂದಲೂ ಹೀಗೆ ಇತ್ತು ಎಂದು ಹೊಸಬರು ನಂಬುವಂತಾಗಿದೆ. screenplay - ಚಿತ್ರಕಥೆಯನ್ನು ವೇಷಧಾರಿಗಳೇ ನಿರ್ದರಿಸಿದರೆ ಪ್ರಸಂಗ ಕಥಾನಾಯಕ ಪಧಾನವಾಗುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಹಿತಮಿತವಾದ ಬದಲಾವಣೆಮಾಡಿದರೇ ಓಳ್ಳೆಯದು ಎಂದು ನನ್ನ ಅಭಿಪ್ರಾಯ. ಪದವನ್ನು ಬರೆಯುವುದನ್ನು ಮತ್ತು ಎಲ್ಲಿ ಬಳಸಬೇಕೆನ್ನುವುದನ್ನು ಪ್ರಸಂಗ ರಚನಾ ಪ್ರವೀಣರಿಗೇ ಮತ್ತು ಭಾಗವತರಿಗೆ ಬಿಟ್ಟು ಬಿಡುವುದು ಒಳ್ಳೆಯದು. ವೇಷಧಾರಿಗಳ ಅಭಿಪ್ರಾಯಕ್ಕೆ ಯಾವಾಗಲೂ ಬೆಲೆ ಇದೆ. ವೇಷಧಾರಿಗಳೇ ಬದಲಾಯಿಸುವುದಾದರೆ ಅವರು ಭಾಗವತಿಕೆ ಬರುವವರಾದರೂ ಅಗಿರಬೇಕು.

No comments:
Post a Comment
Please leave a note about what you think about this write up. Thanks.