Ragu Kattinakere ಈ ನಂಬಿಕೆಯ ವ್ಯವಹಾರಕ್ಕೆ ಭಾರತೀಯ ಸಂಪ್ರದಾಯದಲ್ಲಿ ಮುಖ್ಯ ಸ್ಥಾನ ಇಲ್ಲ. ಬರಿ ನಂಬಿಕೆಯನ್ನೇ ಆಧಾರವಗಿಟ್ಟು ನಮ್ಮ ಪರಂಪರೆ ಇಲ್ಲ. ಪ್ರಮಾಣಾಧಾರಿತ ತರ್ಕ ಮತ್ತು ಅನುಭಾವ ಮಾತ್ರ ಮುಖ್ಯ. ಬುದ್ಧಿ ಮತ್ತು ಶ್ರದ್ಧೆ ಎರಡೂ ಕಲಿಯಲು ಅತ್ಯವಶ್ಯಕ. ಆದರೆ ನಂಬಿಕೆ ಮತ್ತು ಶ್ರದ್ಧೆಗೂ ಸ್ಥಾನ ಕಲ್ಪಿಸಿರುವುದು ವಿದ್ಯೆ ಕಲಿಯಲು ಮತ್ತು ಅಸಹಿಷ್ಣುತೆ ಮತ್ತು ದ್ವೇಷವನ್ನು ತಡೆಯಲು. ಬೇರೆಯವರ ನಂಬಿಕೆಯನ್ನು ಅಪಹಾಸ್ಯ ಮಾಡುವುದು ಭಾರತೀಯರ ಲೆಕ್ಕದಲ್ಲಿ ಬುದ್ಧಿಯ ಕೆಲಸ ಅಲ್ಲ. ಪ್ರಾಮಾಣಿಕ ವಾದದಮೂಲಕ ಬುದ್ಧಿಯನ್ನು ಉಪಯೋಗಿಸಿ ಯಾವುದೋ ಒಂದು ನಂಬಿಕೆ ತಪ್ಪು ಎಂದು ಸಾಧಿಸಬಹುದು ತೋರಿಸಬಹುದು ತರ್ಕಮಾಡಬಹುದು ಅಷ್ಟೆ. ಶಂಕರರಂತವರು ಮಾಡಿದ್ದು ಅದು. ತಾಳಮದ್ದಲೆಯದು ಪಾತ್ರ ಸಮರ್ಥನೆ ಮಾಡುವ ಸುಳ್ಳುವಾದ. ಇದು ನಮ್ಮ ಆಚಾರ್ಯರು ಮಾಡಿದ ತರ್ಕಬದ್ಧವಾದ ವಾದಗಳಲ್ಲ. ತಾಳಮದ್ದಲೆಯ ವಾದಗಳಲ್ಲಿ ಅನೇಕ ತಪ್ಪುಗಳಿರುತ್ತವೆ. ಇಲ್ಲಿ ಶೇಣಿ ಅವರ ಎರಡನೇ ವಾಖ್ಯ ತಪ್ಪು. ಅದನ್ನು ಅವರು ಯಾವುದೋ ನೆಲೆಯಲ್ಲಿ ಹೇಳಿರಬಹುದು ಆದರೆ "ನಂಬುಗೆಯಲ್ಲಿ ಸಂಶೋಧನೆಗೆ ನೆಲೆಯಿಲ್ಲ" ಎಂಬ ಮಾತಿಗೆ ಶಾಸ್ತ್ರದಲ್ಲಿ ಆಧಾರ ಸಿಕ್ಕದು ಎಂದು ನನ್ನ ತಿಳುವಳಿಕೆ. ಮೊದಲು ನಂಬಿಕೆ ನಂತರ ಸಂಶೋಧನೆ - ಶದ್ಧಾವಾನ್ ಲಬತೆ ಜ್ಞಾನಂ... ಇತ್ಯಾದಿ. ಹಾಗಾಗಿ ಈ ತಾಳಮದ್ದಲೆ ವಾದಗಳನ್ನೇ ನಿಜ ಎಂದು ನಂಬಲಾಗದು. ಒರೆಗೆ ಹಚ್ಚಿ ನೋಡಬೇಕು.
ಈ ನಂಬಿಕೆ ಬುದ್ದಿ ಎನ್ನುವ ದ್ವಂದ್ವಕ್ಕೆ ಸಿಕ್ಕಿ ಬೀಳುವವರು ಸಾಧಾರಣ ಅಬ್ರಹಾಮಿಕರ ಯೋಚನಾ ಪದ್ಧತಿಯನ್ನು ತಮ್ಮದಾಗಿಸಿಕೊಂಡವರು. ಅವರು ನಂಬಿಕೆಯ ಒಲವನ್ನೂ ಏತೇಯಿಸ್ಟ್ ಗಳ ಅಬ್ರಹಾಮೀ ವಿರೋಧಿ ಭಾವಗಳನ್ನು ಅಳವಡಿಸಿಕೊಂಡು ಇಂಗ್ಲಿಶ್ ನಲ್ಲಿ ಲಭ್ಯ ಇರುವ ಸಾಹಿತ್ಯ ಓದಿ ಅದನ್ನು ಭಾರತೀಯ ಸಂಪ್ರದಾಯಗಳಿಗೆ ತಪ್ಪಿ ಅಳವಡಿಸಲು ಹೋಗುತ್ತಾರೆ. ಈ ದ್ವಂದ್ವ ಔಟ್ಡೇಟೆಡ್! ತಾವು ರ್ಯಾಶನಿಷ್ಟುಗಳು ಎಂದು ಮೆರೆಯುವ ಉದ್ಧೇಶ. ಅದು ಅಪ್ರಸ್ತುತ ಎಂಬುದು ಅರ್ಥವಾಗಲಿ ಎಂದು ಇಲ್ಲಿ ನಾನು ವಿವರಿಸುವ ಪ್ರಯತ್ನ ಮಾಡಿದ್ದೇನೆ. ಶ್ರದ್ಧೆ ಮತ್ತು ಬುದ್ಧಿಯನ್ನು ಸಮನ್ವಯಮಾಡಿ ಸಾಧಿಸಿ ತೋರಿಸಿದ ಪರಂಪರೆ ನಮ್ಮದು.
ರಾಗು ಕಟ್ಟಿನಕೆರೆ
Radhakrishna Kalchar Vitla ಶೇಣಿಯವರ ಮಾತನ್ನು ಬೇರೊಂದು ರೀತಿಯಲ್ಲೂ ಗ್ರಹಿಸಬಹುದು ಅನಿಸ್ತದೆ.೧.ವೈಚಾರಿಕ ಮನೋಧರ್ಮ(ಬುದ್ಧಿಗೆ ಕೆಲಸ)ಇದು ಇರುವಲ್ಲಿ ಯಾರಿಗೂ ಇತರರ ಮೇಲೆ ಸವಾರಿ ಮಾಡುವುದು ಶಕ್ಯವಿಲ್ಲ.ವೈಚಾರಿಕರ ದೃ಼ಷ್ಟಿಯಲ್ಲಿ ಮಹಾ ಪುರುಷನಾಗುವುದು ಕಷ್ಟ.೨.ಶ್ರದ್ಧೆಯೇ ಪ್ರಧಾನವಾಗಿರುವಲ್ಲಿ (ವಿಚಾರದ ಕೊರತೆ ಇರುವಲ್ಲಿ) ಪ್ರಶ್ನಿಸದೆ ಅನುಸರಿಸುವ ಮನೋಧರ್ಮ ಇರುತ್ತದೆ.ಅಂತಹ ಮಂದಿಯ ಕಣ್ಣಿನಲ್ಲಿ ಮಹಾಪುರುಷನೆನಿಸುವುದು ಸುಲಭ.ಅವರು ಎಲ್ಲವನ್ನು ಶ್ರದ್ಧೆಯಿಂದ ಕಾಣುವುದರಿಂದ ಇವರ ಕುರಿತು ಪ್ರಶ್ನೆಗಳು ಹುಟ್ಟುವುದಿಲ್ಲ.೩.ನಂಬುಗೆ ಇರುವಲ್ಲಿ ಶೋಧ ಬುದ್ಧಿ ಬರುವುದು ಅಶಕ್ಯ.ಶೋಧನೆ ಮಾಡುವುದು ನಂಬುಗೆ ಇಲ್ಲವಾದಾಗಲೇ.ನಂಬಿದ ಮೇಲೆ ಸಂಶೋಧನೆ ಅಪ್ರಸಕ್ತ.ಇದು ಸಾಮಾನ್ಯ ಜನಮನೋಧರ್ಮದ ಕುರಿತು ಆಡಿದ ಮಾತು.ವೈದ್ಯಕೀಯ,ಜ್ಯೋತಿಷ,ಮಂತ್ರವಾದ ಇತ್ಯಾದಿ ಕ್ಷೇತ್ರಗಳಲ್ಲಿ ನಂಬುಗೆ ಇದ್ದಾಗ 'ಇದು ಹೌದೆ?' ಅನ್ನುವ ಸಂದೇಹ ಅಥವಾ ಪ್ರಶ್ನೆ ಮೂಡುವುದೇ ಇಲ್ಲ.ತಾಳಮದ್ದಲೆ ಕ್ಷೇತ್ರದಲ್ಲಿ ಆಶು ಸ್ವರೂಪದಲ್ಲಿ ಬಂತು ಎಂಬುದರಿಂದ ಇಂತಹ ಮಾತುಗಳ ಮೌಲ್ಯ ಹೆಚ್ಚು ಅನ್ನುವುದು ನನ್ನ ಅಭಿಪ್ರಾಯ.೩.ನಂಬುಗೆ ಇರುವಲ್ಲಿ ಶೋಧ ಬುದ್ಧಿ ಬರುವುದು ಅಶಕ್ಯ.ಶೋಧನೆ ಮಾಡುವುದು ನಂಬುಗೆ ಇಲ್ಲವಾದಾಗಲೇ.ನಂಬಿದ ಮೇಲೆ ಸಂಶೋಧನೆ ಅಪ್ರಸಕ್ತ.ಇದು ಸಾಮಾನ್ಯ ಜನಮನೋಧರ್ಮದ ಕುರಿತು ಆಡಿದ ಮಾತು.ವೈದ್ಯಕೀಯ,ಜ್ಯೋತಿಷ,ಮಂತ್ರವಾದ ಇತ್ಯಾದಿ ಕ್ಷೇತ್ರಗಳಲ್ಲಿ ನಂಬುಗೆ ಇದ್ದಾಗ 'ಇದು ಹೌದೆ?' ಅನ್ನುವ ಸಂದೇಹ ಅಥವಾ ಪ್ರಶ್ನೆ ಮೂಡುವುದೇ ಇಲ್ಲ.ತಾಳಮದ್ದಲೆ ಕ್ಷೇತ್ರದಲ್ಲಿ ಆಶು ಸ್ವರೂಪದಲ್ಲಿ ಬಂತು ಎಂಬುದರಿಂದ ಇಂತಹ ಮಾತುಗಳ ಮೌಲ್ಯ ಹೆಚ್ಚು ಅನ್ನುವುದು ನನ್ನ ಅಭಿಪ್ರಾಯ.೩.ನಂಬುಗೆ ಇರುವಲ್ಲಿ ಶೋಧ ಬುದ್ಧಿ ಬರುವುದು ಅಶಕ್ಯ.ಶೋಧನೆ ಮಾಡುವುದು ನಂಬುಗೆ ಇಲ್ಲವಾದಾಗಲೇ.ನಂಬಿದ ಮೇಲೆ ಸಂಶೋಧನೆ ಅಪ್ರಸಕ್ತ.ಇದು ಸಾಮಾನ್ಯ ಜನಮನೋಧರ್ಮದ ಕುರಿತು ಆಡಿದ ಮಾತು.ವೈದ್ಯಕೀಯ,ಜ್ಯೋತಿಷ,ಮಂತ್ರವಾದ ಇತ್ಯಾದಿ ಕ್ಷೇತ್ರಗಳಲ್ಲಿ ನಂಬುಗೆ ಇದ್ದಾಗ 'ಇದು ಹೌದೆ?' ಅನ್ನುವ ಸಂದೇಹ ಅಥವಾ ಪ್ರಶ್ನೆ ಮೂಡುವುದೇ ಇಲ್ಲ.ತಾಳಮದ್ದಲೆ ಕ್ಷೇತ್ರದಲ್ಲಿ ಆಶು ಸ್ವರೂಪದಲ್ಲಿ ಬಂತು ಎಂಬುದರಿಂದ ಇಂತಹ ಮಾತುಗಳ ಮೌಲ್ಯ ಹೆಚ್ಚು ಅನ್ನುವುದು ನನ್ನ ಅಭಿಪ್ರಾಯ.
No comments:
Post a Comment
Please leave a note about what you think about this write up. Thanks.