I wrote/composed a bhajan in praise of the diety of the Kattinakere village temple Madhukeshwara. The words "ಕೇದಾರವಾರಿ ಪ್ರೋಕ್ಷಿತ ಘನಘೋಷ" mean ಓಂಕಾರ/Omkara: The splash/sound of the river Mandakini flowing down Kedara is itself Omkara. Listen to the bhajan below (click on the text) and let me know any inaccuracies or things you notice. Thank you.
ಗಂಗಾವೃತಕೇಶಕಟ್ಟಿದಕೆರೆಯತಿಕಷ್ಟದಿಪೊರೆ ಮತಿ
ಗೆಟ್ಟ ಭಕುತವ್ರಾತ
ಪುಟ್ಟದತೆರ ಗತಿಯಿಷ್ಟದಲೀಯತಿ
ಪ್ರೀತ ವಿಶ್ವನಾಥ||೧||
ಶ್ರೀ ಮಧುಕೇಶ್ವರ ಗೌರಿಮನೋಹರ
ಘನಸಂಚಿತಕೇಶ
ಮಧುಮದನಾರಿ ಕೇದಾರವಾರಿ
ಪ್ರೋಕ್ಷಿತ ಘನಘೋಷ ||೨||
(ಸಾಹಿತ್ಯದ ರಚನೆ ಮತ್ತು ಸಂಗೀತ - ರಾಗು)
ಪ್ರತಿ ಸಾಲಿನಲ್ಲಿ ೧೫ ಮತ್ತು ೯ ಮಾತ್ರೆಗಳಿವೆ ಒಟ್ಟು ೨೪ ಅಂದರೆ ೮ ಅಕ್ಷರದ ಮೂರು ಆವರ್ತನೆ ಬರುವಂತೆ ಇದೆ (ಕೊನೆಯ ಅಕ್ಷರದ ಮಾತ್ರೆ ಒಂದು ಎಂದು ಗಣಿಸಿದರೆ). ಮಧ್ಯದ ಸಾಲಿನಲ್ಲಿ ಒಂದ್ಯ್ ಮಾತ್ರೆ ಹೆಚ್ಚು ಮಟ್ಟು ಬೇರೆ. ರಾಗ ಯಮುನಾ ಕಲ್ಯಾಣಿ. ಇದು ಸಾಹಿತ್ಯ ಗುನುಗಿ ರಚನೆ ಸರಿಯೆನಿಸಿದ ಕೂಡಲೆ ಒಂದೇಸಾರಿ ಹೇಳಿ ಮುದ್ರಿಸಿದ ಧ್ವನಿ. ಹಾಗಾಗಿ ಅಲ್ಲಲ್ಲಿ ರಚನೆಯಾಗುವಾಗ ಸಹಜವಾದ ಸ್ವರಚಲನ ಹುಡುಕಾಟ ಸ್ವಲ್ಪಕಾಣಿಸುತ್ತದೆ. ಸಂಯೋಜನೆ ಸ್ಥಿರವಾದಮೇಲೆ ಸ್ವರಗಳಬಳಕೆ ಸ್ಥಿರವಾಗಿ ಇನ್ನೂ ಹೆಚ್ಚು ಮನೋಧರ್ಮ ಬಳಸಲು ಅನುವಾಗುತ್ತದೆ.
In Devanagari script:
-- रागु विरचित