ನಾಬರೆದ ಹಾಡುಗಳು
- ಕವಿತೆ ಕ. ವನಗಳಲ್ಲ.
ಕವಿಗೋಷ್ಠಿ. ಯೊಳಗಲ್ಲಿ,
- ಕೋಗಲೆ೦ದಲ್ಲ.
ಋಷಿಕಾಣ.ದಅನುಭವದ
- ದರ್ಶನದ ಬೆಳಕಲ್ಲ.
ಸರಿತಪ್ಪಿನ ಅರಿವುಗಳ
- ತರತಮಕೆ ತೆರಪಿಲ್ಲ.
ಶಾಸ್ತ್ರಗಳ ತತ್ವಗಳ
- ಅರ್ಥಗಳ ತೆರನಲ್ಲ.
ಎದೆಯರಲ ಕೆಣಕಿದಿವು
- ಕಣುಕ ಕಿರುಪಲ್ಲ:
ಕಹಿನೆನಪಿನೆಳೆಯೆಳೆದು
- ಒಳಗೆ ಕಳು.ಹಲಿಯೆ೦ದು.
ಕಲ್ಲಮನಸಿನ ಸೊಲ್ಲ
- ಆಲಿಸಲಿ ಬ೦ದು.
ನಮ್ಮನದ ತುಡಿತಕಿವು
- ತುಟಿಯವೋಲಿರಲೆ೦ದು,
ಎದೆಯಗುಡಿಗಳ ಘ೦ಟೆ
- ನಾದದಲಿ ಮಿ೦ದು.
ಗದ್ಯಕಿರದರ್ಥಗಳ
- ಧಾಟಿ, ಭಾವದೋಳ್ಕಟ್ಟೆ
ಮಾತಿಗಿರದೊಲುಮೆನೆಲೆ
- ಹಾಡ ಹೊಟ್ಟೆಯಲಿ.
-
-
-
- --ರಾಗು ಕಟ್ಟಿನಕೆರೆ.
- --ಛ೦ದಸ್ಸು: ರಗಳೆ
-
-
(ಅಪ್ರಯತ್ನಪೂರ್ವಕವಾಗಿ ಬರೆದ ಈ ಹಾಡು, ಕವಿಗಳ ನೆಚ್ಚಿನ ರಗಳೆಯಾಗಿ ಪರಿಣಮಿಸಿದೆ! ಅದನ್ನು ಬರೆದಮೇಲೆ ಗಮನಿಸಿದ್ದರಿ೦ದ ಅಪಭ್ರ೦ಶಗಳನ್ನ ಇಲ್ಲಿ ಗುರುತಿಸಿದ್ದೇನೆ - ಕೆಲವೆಡೆ ಪಾದಗಳಲ್ಲಿ ಕೆಲವು ಮಾತ್ರೆ ಕಡಿಮೆ ಅಥವಾ ಹೆಚ್ಚಿದೆ, ಗಣವಿಭಜನೆಯಲ್ಲಿ ಅಲ್ಲಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಸ್ವರ ವಿಸ್ತಾರಕ್ಕೆ ಅದು ಅನುಕೂಲ ಎ೦ಬ ನೆಪ!)
No comments:
Post a Comment
Please leave a note about what you think about this write up. Thanks.