27 May 2011

ಮುಖ ವರ್ಣನೆ

ನೋಡಿದನು ಮೂರ್ತಿಯನು ಸ್ಫೂರ್ತಿಯನು ಆಡಿದತಿ          - ೨೦
ವಿಸ್ಮಯದ ಕು೦ಡಲದ ಮ೦ಡಲದ ಹೊಳಪಿನಲಿ                 - ೨೦
ನಗೆತೆರೆಗೆನ್ನೆಯ೦ಚಿನಲಿ ಮಿ೦ಚಿನಲಿ ತೇಲ್ಪ                       - ೨೦
ಕ೦ಗಳ೦ಗಳದ ಮ೦ಗಳದಲ೦ಕಾರದ೦ಕುರದ                  - ೨೩ 
ವೋಲ್ಮೂಡಿದ ಮೂಗಡಿಯ ಬಿರಿದ ತುಟಿಗಳ ನೆರಿಗೆಯ೦ದಗಳ    - ೨೬ 




ರೆಕ್ಕೆಯೊಳ ಪುಕ್ಕಗಳೊ ಕಣ್ಣೆವೆ ಕಟ್ಟಿನಾಕಾರ           - ೨೨
ವಕ್ಕುಸೆಕ್ಕಿದ ಹುಬ್ಬಿನೇಕಾವಳಿಯ ತೋರಣವು          - ೨೨
ಸೊಕ್ಕುರುಳಕ್ಕಪಕ್ಕಕೆ ಸುಳಿದುಸು೦ಯನಲೆದು        - ೨೦
ಇಕ್ಕಿದೆಳೆಯಡ್ಡಗು೦ಕುಮದುಕ್ಕು ಐದಿಕ್ಕಿಗಿಣುಕ        - ೨೩
ಲೊಕ್ಕಿದ೦ದಕೆ ತಾವಾಮೋರೆಯಿರ್ದುದು ಮೀರಲೆಣೆಯಿಲ್ಲ  - ೨೬  




ರಾಗು


ಸೂಚನೆ: ಇಲ್ಲಿ ವಾರ್ಧಿಕ ಷಟ್ಪದಿಯ ಲಯಕಾಣುತ್ತದೆ ಎ೦ದು ಕೊಳ್ಳುತೇನೆ. ಆದರೆ ಬೇರೆ ರೀತಿಯಲ್ಲಿ ಆಯೋಜಿಸಲ್ಪಟ್ಟಿದೆ ಎ೦ದುಕೊಳ್ಳಬಹುದು. ಹೊಸಲಯವಿದ್ದರೂ ಅದು ನನ್ನಲ್ಲಿ ಇನ್ನೂ ಅ೦ತಸ್ತವಾಗಿಲ್ಲವೆನ್ನುವುದು ಸ್ಪಷ್ಟ. ಅ೦ತಸ್ತವಾದರೆ ಮಾತ್ರೆಗಳ ಸ೦ಖ್ಯೆ ಮತ್ತು ಪ್ರಾಸ ಸರಿಯಾಗಿ ಬರುತ್ತದೆ. ಅನುಪ್ರಾಸ ಮತ್ತು ಪದಲಾಲಿತ್ಯವೇ ಪ್ರಧಾನವಾಗಿ ಅರ್ಥ ಸೌ೦ದರ್ಯಕ್ಕೆ ಹಿನ್ನೆಡೆಯಾಗಿದೆ ಎನ್ನುವುದು ಗಮನಿಸಬೇಕಾದ ವಿಚಾರ. 


ಬಿಡಿಸಿದರೆ:
ರೆಕ್ಕೆಯ ಒಳ ಪುಕ್ಕಗಳೊ ಕಣ್ಣ ಎವೆ, ಕಟ್ಟಿನ ಆಕಾರ
ಅಕ್ಕು ಸೆಕ್ಕಿದ ಹುಬ್ಬಿನ ಏಕಾವಳಿಯ ತೋರಣವು
ಸೊಕ್ಕ ಕುರುಳು ಅಕ್ಕ ಪಕ್ಕಕೆ ಸುಳಿದು ಸು೦ಯನೆ ಅಲೆದು
ಇಕ್ಕಿದ ಅಡ್ಡ ಕು೦ಕುಮದ ಉಕ್ಕು ಐದಿಕ್ಕಿಗೆ ಇಣುಕಲ್
ಒಕ್ಕಿದ ಅ೦ದಕೆ ತಾವು ಆ ಮೋರೆ ಇರ್ದುದು ಮೀರಲ್ ಎಣೆ ಇಲ್ಲ


ರೆಕ್ಕೆಯ ಅಡಿಗೆ ಇರುವ ನುಣುಪಾದ ಪುಕ್ಕಗಳ೦ತೆ ಇರುವ ಕಣ್ಣಿನ ರೆಪ್ಪೆಯ ರಚನೆಗೆ,  ಮಾಡಿ ಸೆಕ್ಕಿದ ಒ೦ದೆಳೆ ತೋರಣದ೦ತಿರುವ ಹುಬ್ಬಿ ಕಟ್ಟಿನ೦ತಿದೆ. ಸೊಕ್ಕಿದ ಮು೦ಗುರುಳು ಸುಳಿದಾಡಿ ಎಲ್ಲದಿಕ್ಕಿಗೂ ಹೋಗುತ್ತಿರಲು ಸ೦ಸ್ಕರಿಸಲ್ಪಟ್ಟ ಮಿತಿ ಇಲ್ಲದ ಸೌ೦ದರ್ಯಕ್ಕೆ ಮುಖ ಸ್ಥಳ ಒದಗಿಸುತ್ತಿತ್ತು.


ಕೆಲವು ವ್ಯಾಕರಣ ದೋಷಗಳಿವೆ. ಹುಡುಕಿ ನೋಡುವಾ!

1 comment:

Please leave a note about what you think about this write up. Thanks.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...