ಪೇಸ್ಬುಕ್ ನಲ್ಲಿ ನೆಡೆದ ಸಂಭಾಷಣೆಯನ್ನು ಇಲ್ಲಿ ಹಾಕಿದ್ದೇನೆ (Open Group):
============
Harish Kote Subbarao ಬಹುತೇಕ ಎಲ್ಲಾ ಭಾಗವತರು "ಮಾನೀನಿ ಮಾಣಿಯೇ" ಎಂದು ಹಾಡುವುದೇಕೆ? ಹೇಳಿಕೊಡುವುದೇ ಹಾಗೋ? ಸ್ವತಂತ್ರ ಚಿಂತನೆಯ ಕೊರತೆಯೋ ಅಥವಾ ಎರಡೂ ಕಾರಣಗಳೋ?
ಪದ್ಯ ಇರುವುದು "ಮಾನಿನೀ ಮಣಿಯೆ ಬಾರೆ ಮಂಜುಳ ನಾಗವೇಣಿ" ಎಂದು. ಅದನ್ನು "ಮಾನೀನಿ ಮಾಣಿಯೇ ಬಾರೆ ಮಂಜೂಳ ನಾಗ | ವೇಣಿ.." ಎಂದು ಹಾಡುವವರೇ ಜಾಸ್ತಿ.
============
Murthy Hosabale EE PADYA BAHUTeKA BHAAGAVATARU HAAdUVAAGA VIlAmBITA LAYADALLI HAAdUTTARE. TAAlAKKE HOmDISIKIllALUBeKAAGI MAANEENU MAnI ENNABAHUDU ENNUVUDU NANNA BHAAVANE.
============
ನನ್ನ ಅಭಿಪ್ರಾಯ
============
ನೀವು ಹೇಳಿದಂತೆ ಸಾಹಿತ್ಯಹಾಳಾಗಬಾರದು ಎನ್ನುವುದು ಸರಿ. ಆದರೆ ಮೂರ್ತಿಯವರು ಹೇಳಿದ್ದೂ ಸರಿಯಿದೆ. ಆದಿತಾಳದಲ್ಲಿ - "ಕಡ್ತಗ ತಾ ಹಸ್ತ" ಕ್ಕೆ ಹೊಂದಿಕೊಂಡು "ಮಾ ನೀ ನಿ" ಬರುತ್ತದೆ. "ಮಾನಿನಿ ಮ"ಣಿಯೆ ಎಂದರೂ ಸರಿ ಆಗುತ್ತದೆ (ಆದರೆ ನಿ ಧೀರ್ಘ ಹೋಗುವುದನ್ನು ಗಮನಿಸಿ). ಮಾ(ನಿ) ಗೆ ಮೂರನೇ ಸಪ್ತಕದ ಸ ಮತ್ತು ರಿ ಸ್ವರ ಬರುವಂತೆ ತೋರುತ್ತದೆ (ಬಿಳಿ-೭ ಶ್ರುತಿಯಲ್ಲಿ ನೋಡಿದೆ). ರಿ (ನಿ)ಯನ್ನು ಎಳೆದರೇ ದಾಟಿಗೆ ಸೌಂದರ್ಯ. ತಾಳ ಪದ್ಯದ ಮೊದಲ ಅಕ್ಷರಕ್ಕಿಂತ ಒಂದು ಮಾತ್ರೆ ಮೊದಲೇ ಆರಂಭವಾಗುತ್ತದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳೋಣ. ಹಾಗಾಗಿ ಯಕ್ಷಗಾನದಲ್ಲಿ ತಾಳಕ್ಕಾಗಿ ಸಾಹಿತ್ಯವನ್ನು ಸ್ವಲ್ಪಹಿಮ್ಮೆಟ್ಟಿಸುವ ರೂಢಿ ಸ್ವಲ್ಪಮಟ್ಟಿಗೆ ಅನಿವಾರ್ಯ. ಕವಿಗಳ ಸಾಹಿತ್ಯಕ್ಕೂ ಅವರು ಅಂದುಕೊಂಡು ಬರೆದ ತಾಳಕ್ಕೂ ಸ್ವಲ್ಪ ಹೊಂದಾಣಿಕೆ ಕಡಿಮೆ ಇದ್ದಾಗ ಹೀಗೆ ಮಾಡಬೇಕಾಗುತ್ತದೆ. ತ್ರಿವುಡೆಯಲ್ಲಿ ಹೇಳಿದರೂ ಹೀಗೇ ಆಗುವುದು. ಶುಧ್ಧ ಸಾಹಿತ್ಯ ಬೇಕಾದರೆ ಗಮಕ ವಾಚನ ಮಾಡಬೇಕಾಗುತ್ತದೆ. ಅಲ್ಲಿ ತಾಳದ ರಗಳೆ ಇಲ್ಲ. ಆದರೆ ಅಲ್ಲೂ ಛಂದಸ್ಸಿಗಾಗಿ ಶಬ್ಧಗಳನ್ನು ಬಲಿ ಕೊಡುವ ರೂಢಿ ಇದೆ ಎನ್ನುವುದನ್ನು ಮರೆಯಬಾರದು. ಕುಮಾರವ್ಯಾಸನ ಶ್ರೀವನಿತೆಯರಸನೇ ಪದ್ಯದಲ್ಲಿ ಕೊನೆಯ ಪದ ನೆನಪಿಸಿಕೊಳ್ಳಿ ಭಾಮಿನೀ ಷಟ್ಪದಿಗೆ ಹೊಂದಿಸಲು ನಾ(ರಾ)ಯಣ ಅಪಭ್ರಂಶವಾಗಿದೆ: ಗದುಗಿನ ವೀರನಾ(ರ)ಯಣ.
=============
Harish Kote Subbarao
Ragu Kattinakere ವಿಲಂಬ ಲಯದಲ್ಲಿ ಹಾಡುವಾಗ ಎದುರಾಗುವ ಸಮಸ್ಯೆಯನ್ನು ಸೋದಾಹಾರಣವಾಗಿ ಈ ಮೊದಲೇ ಹೇಳಿದ್ದೇನೆ. ಅಜ್ಞಾನ ಬೇರೆ. ಅನಿವಾರ್ಯವಾಗಿ ಸೊಗಸಿಗಾಗಿ ಶುದ್ಧತೆಯನ್ನು ಉದ್ಧೇಶಪೂರ್ವಕವಾಗಿ ಹಿಮ್ಮೆಟ್ಟಿಸುವುದು ಬೇರೆ. ಅದರಲ್ಲೂ ಸಾಹಿತ್ಯದ ಲಯಕ್ಕೂ, ತಾಳಕ್ಕೂ ಸ್ವಲ್ಪ ವ್ಯತ್ಯಾಸವಿದ್ದರೆ ಈ ರೀತಿ ಬದಲಾವಣೆ ಅನಿವಾರ್ಯವಾಗುತ್ತದೆ. ಸಮರ್ಥರೇ ಇದನ್ನು ಮಾಡಿದ್ದಾರೆ ಹಲವೊಮ್ಮೆ. ನಿಮ್ಮ ತಂದೆಯವರ ಸೇವೆ ಶ್ಲಾಘನೀಯ. ಅಂತವರಿದ್ದುದರಿಂದಲೋ ಏನೋ ಮುಖ್ಯವಾಹಿನಯ ಸಾಹಿತ್ಯಕ್ಕಿಂತ ಬಯಲಾಟದ ಪ್ರಸಂಗಗಳು ಶುದ್ಧವಾಗಿವೆ. ಅವರ ಕಳಕಳಿಯೂ ಒಳ್ಳೆಯದೇ. ಹಾಡಿಗಾಗಿ ಸಾಹಿತ್ಯ ಅಶುದ್ಧವಾಗಬೇಕು ಎನ್ನುವುದು ನನ್ನ ಅಭಿಪ್ರಾಯವಲ್ಲ.
ತಥಾಕಥಿತ ತಾಳಕ್ಕಾಗಿ (?) "ಗಜಮೂಖದಾವಗೆ" ಅನ್ನುವವರನ್ನೂ ಕೇಳಿದ್ದೇನೆ....ತಾಳಕ್ಕೆ ಸರಿಯಾಗಿ, ಸಾಹಿತ್ಯಕ್ಕೂ ಸರಿಯಾಗಿ ಹಾಡಬಹುದು....may be difficult but not impossible.ಅದೆಲ್ಲ ಭಾಗವತರ ಸಾಮರ್ಥ್ಯ. ಉಡುಪಿಯಲ್ಲಿ ಪ್ರಕಟವಾದ ಹೆಚ್ಚಿನ ಹಳೆ ಪ್ರಸಂಗ ಎಡಿಟ್ ಮಾಡಿದವರು ನನ್ನ ತಂದೆ..(he is no more now) ಅವರು ಪದ್ಯ ಹಾಡಿ ರಾಗ ತಾಳಗಳು ಸಾಹಿತ್ಯ/ಭಾವ/ ಸಂಧರ್ಭಗಳಿಗೆ ಸರಿ ಇದೆಯೋ ನೋಡಿ, ಬೇಕಾದ ಕಡೆ ರಾಗ ತಾಳ ಸಾಹಿತ್ಯ ಬದಲು ಮಾಡಿ, ಅಗತ್ಯ ಬಿದ್ದರೆ ಸ್ವಂತ ಪದ್ಯವನ್ನೂ ಹಾಕಿದ್ದರೆ. ಭಾಗವತರೊಬ್ಬರು "ಮಾನಿನೀ ಮಣಿಯೆ ಬಾರೆ" ಎಂದೇ ಹಾಡಿದ ಆಡಿಯೋ ನನ್ನಲ್ಲಿರಬೇಕು...ಸಾಧ್ಯವಾದರೆ ಊರಿಗೆ ಹೋದಾಗ upload ಮಾಡುತ್ತೇನೆ.
================
Harish Kote Subbarao
Thanks...!! ಉದ್ದೇಶಪೂರ್ವಕ ತಪ್ಪಾಗಿ ಹಾಡುವವರನ್ನು ತಿದ್ದಲು ಸಾಧ್ಯವಿಲ್ಲ ಬಿಡಿ, ತಿದ್ದಿಕೊಳ್ಳಿ ಎಂದು ಹೇಳಿದರೂ "ನಮಗೆ ಹೇಳಲಿಕ್ಕೆ ನೀವು ಯಾರು?" ಅಂದರೆ ನಮ್ಮಲ್ಲಿ ಉತ್ತರವಿಲ್ಲ ನೋಡಿ...(ಇಂಥವರ ಮಗ ಅಂದರೂ ಅವರಿಗೆ ಸಾಲುವುದಿಲ್ಲ). ಅಜ್ಞಾನದಿಂದ ಹಾಡುವವರು ಸರಿಪಡಿಸಿಕೊಳ್ಳಬಹುದು ಎಂಬುದೇ ನನ್ನ ಆಶಯ. AP ಪಾಠಕ್ ಅವರ ವೀಡಿಯೊ ಲೋಡ್ ಮಾಡಿದವರು ಬರೆದ ಸಾಹಿತ್ಯ ನೋಡಿ.."ಮಾನೀನಿ" ಎಂದೇ ಇದೆ :). ಇಂಥದ್ದೇ ಇನ್ನೊಂದು ಉದಾಹರಣೆ "ನೋಡಿ ನಿರ್ಮಲ ಜಲ ಸಮೀಪದಿ" ಅದನ್ನು ಹೀಗೆಯೇ ತಥಾಕಥಿತ "ತಾಳಕ್ಕಾಗಿ" "ನೋಡಿ ನೀರ್ಮಲ ಜಲಸಮೀಪದಿ" ಎಂದು ಹಾಡುತ್ತಾರೆ. ತಾಳಕ್ಕಾಗಿ ಸಾಹಿತ್ಯದ ಬದಲಾವಣೆ ಅನಿವಾರ್ಯವಲ್ಲ; ಸ್ವಲ್ಪ ಗಮನ ಹಾಗು ಅಭ್ಯಾಸ ಮಾಡಿದರೆ ತಾಳ, ಸಾಹಿತ್ಯ ಹೊಂದಿಸ ಬಹುದು; ಸಾಹಿತ್ಯದಲಿರುವ ದೀರ್ಘ ಎಳೆದು ಅಥವಾ appropriate pause ಕೊಟ್ಟು.
23 November at 17:57 ·
Amruthdev Kattinakere ಚಂದ್ರಹಾಸ ಪುರಾಣಿಕರು ಸಾಹಿತ್ಯ ಶುದ್ಧವಾಗಿ ’ಮಂಜುಳ’ ನಾಗವೇಣಿ ಎಂದೇ ಹೇಳಿದ್ದಾರೆ. ಆದರೆ ಫಕ್ಕನೆ ಬರುವ ಆ ಶಬ್ದಕ್ಕೆ ಅಷ್ಟು ವೇಗವಾಗಿ ಅಭಿನಯ ಮಾಡುವುದು ಹೇಗೆಂಬುದು ಪ್ರಶ್ನೆ.
23 November at 22:46
Ragu Kattinakere
.
ಇಲ್ಲಿ ತಾಳಕ್ಕೆ ಹೊಂದಿಸುವ ಅನಿವಾರ್ಯ ಎನ್ನುವುದು ಕೇವಲ ಉಧ್ಧಟತನ ಎಂದು ಭಾವಿಸಬಾರದು. ಅದು ಕೆಲವೊಂದೆಡೆ ಛಂದಸ್ಸಿನ ಅವಶ್ಯಕತೆ. ತಾಳದ ಘಾತಬರುವಲ್ಲಿ ಲಘು ಬರಬಾರದು ಬಂದರೆ ಅದು ಕೊನೆಯ ಅಥವಾ ಮೊದಲ ಮಾತ್ರೆಯಾಗಿರಬೇಕು, ಎರಡು ಲಘುಗಳು ಘಾತಬರುವಲ್ಲಿದ್ದರೂ ಇದೇ ಸಮಸ್ಯೆ. ಧಾಟಿಗೆ ಆಲಾಪನೆ ಘಾತಬರುವಲ್ಲಿ ಚಂದವಾಗುವುದಾದರೆ ಅಲ್ಲಿ ಹೃಸ್ವ, ಒತ್ತಿಲ್ಲದ ಅಕ್ಷರ ಆಥವಾ ಹೃಸ್ವಸ್ವರೀಯವ್ಯಂಜನ ಬಂದರೆ (ಲಘು) ಭಾಗವತರು ಅನಿವಾರ್ಯವಾಗಿ ಆ ಅಕ್ಷರವನ್ನು ಒತ್ತಿ/ಎಳೆದು ಹೇಳಬೇಕಾಗುತ್ತದೆ. ಹಾಗೆ ಹೇಳದೇ ಇರಬಹುದು ಆದರೆ ಅಮೃತರು ಹೇಳಿದಂತೆ ಅಭಿನಯಕ್ಕೋ, ಸೌಂದರ್ಯಕ್ಕೋ ಧಕ್ಕೆಯುಂಟಾಗಬಹುದು. ಕಲಾವಿದರಿಗೆ ಎಲ್ಲವನ್ನೂ ಗಮನದಲ್ಲಿಟ್ಟು ವ್ಯವಹರಿಸುವ ಹೊಣೆ ಇರುತ್ತದೆ. ನಾವು ಒಂದೇ ದೃಷ್ಟಿಕೋನದಲ್ಲಿ ನೋಡುವುದು ಬಹಳ ಸೀಮಿತ ಚರ್ಚೆಯಾಗಿಬಿಡಬಹುದು.
ಇಲ್ಲಿ ತಾಳಕ್ಕೆ ಹೊಂದಿಸುವ ಅನಿವಾರ್ಯ ಎನ್ನುವುದು ಕೇವಲ ಉಧ್ಧಟತನ ಎಂದು ಭಾವಿಸಬಾರದು. ಅದು ಕೆಲವೊಂದೆಡೆ ಛಂದಸ್ಸಿನ ಅವಶ್ಯಕತೆ. ತಾಳದ ಘಾತಬರುವಲ್ಲಿ ಲಘು ಬರಬಾರದು ಬಂದರೆ ಅದು ಕೊನೆಯ ಅಥವಾ ಮೊದಲ ಮಾತ್ರೆಯಾಗಿರಬೇಕು, ಎರಡು ಲಘುಗಳು ಘಾತಬರುವಲ್ಲಿದ್ದರೂ ಇದೇ ಸಮಸ್ಯೆ. ಧಾಟಿಗೆ ಆಲಾಪನೆ ಘಾತಬರುವಲ್ಲಿ ಚಂದವಾಗುವುದಾದರೆ ಅಲ್ಲಿ ಹೃಸ್ವ, ಒತ್ತಿಲ್ಲದ ಅಕ್ಷರ ಆಥವಾ ಹೃಸ್ವಸ್ವರೀಯವ್ಯಂಜನ ಬಂದರೆ (ಲಘು) ಭಾಗವತರು ಅನಿವಾರ್ಯವಾಗಿ ಆ ಅಕ್ಷರವನ್ನು ಒತ್ತಿ/ಎಳೆದು ಹೇಳಬೇಕಾಗುತ್ತದೆ. ಹಾಗೆ ಹೇಳದೇ ಇರಬಹುದು ಆದರೆ ಅಮೃತರು ಹೇಳಿದಂತೆ ಅಭಿನಯಕ್ಕೋ, ಸೌಂದರ್ಯಕ್ಕೋ ಧಕ್ಕೆಯುಂಟಾಗಬಹುದು. ಕಲಾವಿದರಿಗೆ ಎಲ್ಲವನ್ನೂ ಗಮನದಲ್ಲಿಟ್ಟು ವ್ಯವಹರಿಸುವ ಹೊಣೆ ಇರುತ್ತದೆ. ನಾವು ಒಂದೇ ದೃಷ್ಟಿಕೋನದಲ್ಲಿ ನೋಡುವುದು ಬಹಳ ಸೀಮಿತ ಚರ್ಚೆಯಾಗಿಬಿಡಬಹುದು.
.
ಹೌದು ಅನ್ನಿಸುತ್ತದೆ. ದಾಸರಪದಗಳನ್ನು ಸಂಗೀತದಲ್ಲಿ ಬಳಸುವಾಗಲೂ ಇಂತಹದ್ದಾಗುತ್ತದೆ. ಯಕ್ಷಗಾನದಲ್ಲಿ ಶುದ್ಧ ಸಾಹಿತ್ಯ ಸಾಧ್ಯವೇ ಇಲ್ಲ ಅನ್ನಬಹುದೇನೋ. ಒಳ್ಳೆ ವಿಚಾರ.
ReplyDeleteಶಾಸ್ತ್ರೀಯ ಸಂಗೀತದಲ್ಲಿ ಇದು ಬಹಳ ಹೆಚ್ಚು. "ವೈ ssssssssssssss ಕುಂಟಪತಿಯ ಕಂಡೆನು" ಎನ್ನುವ ಹಾಸ್ಯವೇ ಇದೆ! ಯಕ್ಷಗಾನದಲ್ಲಿ ಶುದ್ಧ ಸಾಹಿತ್ಯ ಸಾಧ್ಯವೇ ಇಲ್ಲ ಎಂದಲ್ಲ. ಮಿತಿಯಲ್ಲಿ ಮತ್ತು ಕೆಲವು ಅನಿವಾರ್ಯಗಳನ್ನು ಹೊರತುಪಡಿಸಿ ಬಯಲಾಟದ ಪದ ಶುಧ್ಧವೆ. ನೇರವಾಗಿ ಓದುವುದನ್ನು ಬಿಟ್ಟರೆ, ಗಮಕ ವಾಚನದಲ್ಲಿಯೇ ಸಾಹಿತ್ಯ ಶುದ್ಧ. ಗಮಕವನ್ನು ಬಿಟ್ಟರೆ ಬಯಲಾಟದಲ್ಲಿ. ಇದು ಸೈದ್ಧಾಂತಿಕವಾಗಿ. ಆದರೆ ಬಳಕೆಯಲ್ಲಿ ಇರುವುದು ಬೇರೆ. ಬಯಲಾಟದ ಭಾಗವತರು ಏನುಹೇಳುತ್ತಿದ್ದಾರೆಂದು ಎಷ್ಟು ಜನರಿಗೆ ಗೊತ್ತಾಗುತ್ತದೆ? ಸ್ವಂತ ಅವರಿಗೇ ತಿಳಿಯಲಾರದು!
ReplyDeleteHarish Kote yavaru baredaddu oppabekada matu. yakshaganadalli halavu padyagalalli bhagavataru talakke sari hondisalikkagi swalpa mattige tiruchuttare. adannu yathavattagi heluvudu Kastasadhya. adakke sadhane, shradde beku.
ReplyDeleteR.K.Rajarama
ಶುದ್ಧವಾಗಿರಬೇಕು ಆದರೆ ಯಥಾವತ್ತಾಗಿರಬೇಕು ಎನ್ನುವುದು ತಪ್ಪು. ಯಥಾವತ್ತಾಗಿರಬೇಕೆಂದರೆ ಪುಸ್ತಕ ಓದಿದಂತೆ ಓದಬೇಕಷ್ಟೆ! ಇಲ್ಲದಿದ್ದರೆ ಭಾವ/ತಾಳ/ಲಯ/ಏರಿಕೆ ಇವುಗಳನ್ನು ಬಲಿ ಕೊಡಬೇಕು ಅಷ್ಟೆ. ಅನುಭವ ಕಡಿಮೆಯಿದ್ದವರು ಕೆಲವೊಮ್ಮೆ ಚೆನ್ನಾಗಿ ಪದ ಬರೆದಿದ್ದರೂ ಉಳಿದಿರುವ ಲೋಪಗಳನ್ನು ಆಟ ಮಾಡುವಾಗ ಭಾಗವತರು ಸರಿದೂಗಿಸಬೇಕಾಗುತ್ತದೆ. ಒಂದು ಹಂತ ಮೀರಿದಮೇಲೆ ಯಾವುದಕ್ಕೆ ಪ್ರಾಧಾನ್ಯ ಕೊಡಬೇಕು ಎನ್ನುವುದು ಭಾಗವತರ ಸ್ವಾತಂತ್ರ್ಯಕ್ಕೆ ಬಿಟ್ಟ ವಿಚಾರ. ನಿಮಗನ್ನಿಸಿದ್ದನ್ನು ನೇರವಾಗಿ ಹೇಳಿದ್ದು ಬಹಳ ಮೆಚ್ಚಿಗೆಯಾಯಿತು. ಧನ್ಯವಾದಗಳು.
ReplyDeleteಆದರೆ ಈ ಚರ್ಚೆಯ ಅವಶ್ಯಕತೆ ಇಲ್ಲಿ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಮುಖ್ಯ. ಯಾಕೆಂದರೆ ಈ ಪದ್ಯ ಮೂಲ ಅಷ್ಟ ತಾಳದ ಮಟ್ಟಿನಲ್ಲಿದೆ (ಮಧ್ಯಮಾವತಿ- ಅಷ್ಟ) ಅದನ್ನು ತ್ರಿವುಡೆಯಲ್ಲಿ ಹೇಳುವಾಗ ಸಾಹಿತ್ಯವನ್ನು ತಾಳದ ಮಾತ್ರಾ ಗಣಗಳಿಗೆ ಹೊಂದಿಸಲು ಈ ರೀತಿ ಎಳೆಯಬೇಕಾಗುತ್ತದೆ. ಯಕ್ಷಗಾನದಲ್ಲಿ ಮಟ್ಟುಗಳಿಗೆ ಬಹಳ ಮಹತ್ವ ಇದೆ. ಇದೇ ರೀತಿಯ ಹಲವು ಉದಾಹರಣೆಗಳು ಸಿಗುತ್ತವೆ.(ಉದಾ:ಚರಣವೆನಗೆ ಬಲು ನೋವಾಯಿತಯ್ಯ - ಅಷ್ಟ ತಾಳ) (ಚರಣಾ.ವೆನಾಗೆ ಬಲು ನೋವಾಯಿತಯ್ಯ-ತ್ರಿವುಡೆ)
ReplyDeleteಇದು ಆಷ್ಟತಾಳದಲ್ಲಿದೆ ಎನ್ನುವುದು ನನಗೆ ಗೊತ್ತಿಲ್ಲ. ಪ್ರಸಂಗದ ಪಟ್ಟಿ ನನ್ನಬಳಿ ಇಲ್ಲ. ಚರ್ಚಿಸಬೇಕಾಗಿ ಬಂತು. ಭಾಗವತಿಕೆಯ ಅಭ್ಯಾಸ ಇಲ್ಲದವರಿಗೆ ಹಾಗೆ ಏಕೆ ಎಳಯಬೇಕು ಹೀಗೆ ಏಕೆಎಳಯಬೇಕು ಅನ್ನಿಸಬಹುದು. ಅವರಿಗೆ ಸಮಾಧಾನ ಹೇಳುವ ಪ್ರಯತ್ನ ಅಷ್ಟೆ. ಅದು ವ್ಯರ್ಥವಾಯಿತು ಅನ್ನುವ ವಿಚಾರ ಬೇರೆ!
ReplyDelete