07 November 2011

ಬೆಳಗಾಗಬೇಕು

ಬೆಳಗಾಗಬೇಕು
=========
ಜಗ ಸಣ್ಣ ಮನದೊಡ್ಡ ಮರೆತವರು ಮತ್ತೆದುರು ಮೂಡಲೇಬೇಕು
ತಪ್ಪ ತಾಳೀತು ಮನ, ಒಪ್ಪಲು ಕಾಲ ಬೇಕು
ಕಪ್ಪಳಿಸಲಾರವಿಗೆ ಮೂಡಲೇ ಬೇಕು

ತಪ್ಪಲ್ಲ ಒಪ್ಪಿದರೆ ಮಾಡಿದರೊಮ್ಮೆ ಮಾತ್ರ.
ಅಪರೂಪಕೆಡವುವುದು ಸಹಜ, ಸಹಿಸಬೇಕು.
ಬೀಳದೇ ಇರುವವರು ಯಾರಿಲ್ಲ, ಬಿದ್ದವರು ಏಳಲೇಬೇಕು.

ಈ ವೇಷ ಆವೇಶ, ಅಳಿದು ತಮವಿಳಿದು ಬೆಳಗಾಗಬೇಕು.
ಮರೆತವರ ನೆನಪಾಗಿ ಮನದಗುಳಿ ಸರಿದು ಕದತೆರೆದು ಮನ ಮುದಗೊಳ್ಳಬೇಕು.
ಜಗ ಸಣ್ಣ, ಮನಸು ಮೃದುವಾಗಬೇಕು.

ಮುನಿಸಿಕೊಂಡವರ ನೆನಪು ಆಗಿಯೇ ಆಗುತ್ತದೆ. ಆದಾಗ ಎಲ್ಲ ಮರೆತು ಮತ್ತೆ ಸ್ನೇಹಿತರಾಗಬೇಕು ಎನ್ನುವುದು ತಾತ್ಪರ್ಯ.
ಮೂಡಲೇಬೇಕು = ನೆನಪಾಗೇ ಅಗುತ್ತದೆ ಎನ್ನುವ ಅರ್ಥ
ಮೂಡಲೇ ಬೇಕು = ಸೂರ್ಯ ಹುಟ್ಟುವುದು ಮೂಡಲಲ್ಲಿ ಮಾತ್ರ
*"ಈ ವೇಷ ಆವೇಶ" ಮಹಾಬಲಹೆಗಡೆ ಕೆರೆಮನೆ ಇವರ ಯಕ್ಷಗಾನದ ಮಾತುಗಾರಿಕೆಯಿಂದ ಆಯ್ದ ಪದಗುಛ್ಛ

2 comments:

  1. ಮರೆತವರ ನೆನಪಾಗಿ,
    ಮನದಗುಳಿ ಸರಿದು ... ಚಂದವಾಗಿದೆ ಸಾಲುಗಳು.. ಒಟ್ಟಲ್ಲಿ ಅಂದವಿದೆ.

    ReplyDelete
  2. ಧನ್ಯವಾದಗಳು. ನನಗೂ ಆ ಸಾಲೇ ಇಷ್ಟ.

    ReplyDelete

Please leave a note about what you think about this write up. Thanks.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...