14 June 2012

ಸೋಮೇಶ್ವರ ಶತಕ


ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ|| ||

ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ
ಕನ್ನಡಿ ಕೈಯಲ್ಲಿರುವಾಗ ಮುಖನೋಡಲು ನೀರೇಕೆ ಬೇಕು? ನೆಳಲು=ನೆರಳು, ನೀರ ನೆರಳೂ ಬೇಡ ಎನ್ನುವ ಅರ್ಥದಲ್ಲಿರಬಹುದು.

ಕಾಮಧೇನಿರ್ದುಮೂಟಕೆ ಗೊಡ್ಡಾಕಳನಾಳ್ವರೇ
ಕಾಮಧೇನು ಇರ್ದುಂ ಊಟಕೆ ಗೊಡ್ಡಾಕಳ ಆಳ್ವರೇ ? ಕಾಮಧೇನುವೇ ಇದ್ದರೆ ಯಾರಾದರು ಕರಾವಿಗೆ(ಡೈರಿ) ಬರಡು ಆಕಳನ್ನು ಇಟ್ಟು ಕೊಳ್ಳುತ್ತಾರೆಯೇ ?

ಗುಣಯುತರ್ ಪಾಲುಂಡು ಮೇಲುಂಬರೇ?
ಒಳ್ಳೆಯವರು ತಮ್ಮಪಾಲಿಗೆ ಬಂದಿದ್ದನು ಅಲ್ಲದೇ ಇನ್ನೂ ಹೆಚ್ಚು ಅಪೇಕ್ಷಿಸುವರೇ ? ಇದು ಹಾಲನ್ನು ಉಂಡಮೇಲೆ ಮತ್ತೇನು ಉಣ್ಣಬಾರದು ಎಂದು ಆಗುತ್ತದೆಯೇ? ಹೌದು ಎಂದು ಬಲ್ಲವರೊಬ್ಬರು ಹೇಳಿದ್ದಾರೆ.

ಶುಕನೋದಿಂಗುರೆ ಚೆಲ್ವೆ ಕಾಕರವ
ಶುಕನ ಊದಿಂಗೆ (ಗುಣ ಸಂಧಿ) ಉರೆ ಚೆಲುವೆ ಕಾಕರವ ? ಕಾಗೆಯ ಕೂಗು ಶುಕನ ಉಲಿತಕ್ಕಿಂತ ಚೆಲುವೆ?

ರಂಭಾನೃತ್ಯಕಂ ಡೊಂಬರೇ
ರಂಭಾನೃತ್ಯಕ್ಕೆ ಡೊಂಬರ ನೃತ್ಯ ಸರಿಸಮವೇ ? ಹಿಂದಿನ ಪ್ರಶ್ನೆ ಇಲ್ಲಿಗೂ ಅನ್ವಯವಾಗುತ್ತದೆ.
(ಡೊಂಬರಾಟ ಎನ್ನುವುದು ಜಾನಪದ ನೃತ್ಯಗಾಯನ ಪದ್ದತಿ ಎಂದು ಕೇಳಿಬಲ್ಲೆ.)

ರಾಗು ಕಟ್ಟಿನಕೆರೆ

No comments:

Post a Comment

Please leave a note about what you think about this write up. Thanks.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...