ವೀಸೂ: ಸ೦ಪಾದಕೀಯ ಬ್ಲಾಗ್ ಇಸ್ಮಾಯಲ್ ಎ೦ಬವರದು! ಹೆಸರು ಅಡಗಿಸಿಟ್ಟು ಬರೆಯುವುದು ಏಕೆ ? ಎಲ್ಲಾ ಓಕೆ ಸೀಕ್ರೆಟ್ ಯಾಕೆ ?
ಜೀವನ ಕಷ್ಟನೋಡಿ! ಎಡಕ್ಕೋ ಬಲಕ್ಕೋ ವಾಲಲು ಹೆ೦ಡವನ್ನೇ ಕುಡಿಯಬೇಕೂ ಅ೦ತ ಇಲ್ಲ! ಅಲ್ಲವೇ, ನಡೆಯುವಾಗ ಆಕಡೆ ಈಕಡೆ ವಲಿಯುವುದು೦ಟು? ತಪ್ಪಲ್ಲ, ಪೀಸಾದ ಗೋಪುರ ವಾಲಿದ್ದಕ್ಕೇ ಪ್ರಸಿದ್ದ ಅಲ್ಲವೇ? ನೆಟ್ಟಗೆ ಇದ್ದಿದ್ದರೆ ಅದನ್ನು ಯಾರೂ ನೋಡಲೇ ಹೋಗುತ್ತಿರಲಿಲ್ಲವೋ ಏನೊ! ಆದರೆ ಆ ವಾಲಿದ ಗೋಪುರವನ್ನ ಒಮ್ಮೆ ಕಟ್ಟಿದರೆಸಾಕು ಅದುಹಾಗೇ ಇರುತ್ತದೆ. ಆದರೆ ಈ ವಾಲಿದ ಬ್ಲಾಗ್ ಗಳು ಹಾಗಲ್ಲ: ಯಾರಾದರೂ ವಾಲಿದ ಮನುಷ್ಯರೇ ಬರೆಯುತ್ತಾ ಇರಬೇಕಾಗುತ್ತದೆ. ಇ೦ಟರ್ನೆಟ್ ನಲ್ಲಿ ಹಲವಾರು ಈ ರೀತಿಯ ವಾಲಿದ ಬ್ಲಾಗ್ ಗಳಿವೆ! ಎಡಪ೦ಥೀಯರು ಬಲಪ೦ಥೀಯರು ಅಪ್ರಾಮಾಣಿಕರು ಹೀಗೇ ಏನೇನೋ. ಶುಧ್ಧ ಭ೦ಡರೂ ಇದ್ದಾರೆ ಬಿಡಿ. ಅ೦ತವುಗಳಲ್ಲಿ ಭೂತಗಳು ಪ್ರಕಟಿಸುತ್ತಿವೆಯೋ ಎ೦ದು ನನಗೆ ಅನುಮಾನ ಇರುವ ಬ್ಲಾಗ್ ಒ೦ದಿದೆ: ಸ೦ಪಾದಕೀಯ ಅ೦ತ ಅದರ ಹೆಸರು! ಆದರೆ ಅದು ಏನು? ಅದನ್ನ ಬರೆಯುವವರ ಹೆಸರು ಏನು ? ಅವರು ಯಾವಕಡೆಗೆ ವಾಲಿದವರು? ಕುತೂಹಲ.
ಹಿನ್ನುಡಿ:
ಸಂಪಾದಕೀಯ ಬ್ಲಾಗ್ ಬರೆಯುವವರು ಇಸ್ಮಾಯಲ್ ಎಂಬುವವರು ಎ೦ದು ಒಬ್ಬ Facebook ಸಹವರ್ತಿ ತಿಳಿಸಿದರು. ಅದು ತಪ್ಪು ಎ೦ದು ಸಂಪಾದಕೀಯದವರು ಈ ಬ್ಲಾಗಿಗೆ ಬ೦ದು ಹೇಳಿದ್ದಾರೆ. ಆದರೂ ಅವರು ಯಾರು ಎ೦ದು ತಿಳಿಸದಿರುವವರೆಗೂ ಈ ಕೇಳಿಕೆಯೇ ಸರಿ ಎ೦ಬುದು ನನ್ನ ಅಭಿಪ್ರಾಯ.
ಜೀವನ ಕಷ್ಟನೋಡಿ! ಎಡಕ್ಕೋ ಬಲಕ್ಕೋ ವಾಲಲು ಹೆ೦ಡವನ್ನೇ ಕುಡಿಯಬೇಕೂ ಅ೦ತ ಇಲ್ಲ! ಅಲ್ಲವೇ, ನಡೆಯುವಾಗ ಆಕಡೆ ಈಕಡೆ ವಲಿಯುವುದು೦ಟು? ತಪ್ಪಲ್ಲ, ಪೀಸಾದ ಗೋಪುರ ವಾಲಿದ್ದಕ್ಕೇ ಪ್ರಸಿದ್ದ ಅಲ್ಲವೇ? ನೆಟ್ಟಗೆ ಇದ್ದಿದ್ದರೆ ಅದನ್ನು ಯಾರೂ ನೋಡಲೇ ಹೋಗುತ್ತಿರಲಿಲ್ಲವೋ ಏನೊ! ಆದರೆ ಆ ವಾಲಿದ ಗೋಪುರವನ್ನ ಒಮ್ಮೆ ಕಟ್ಟಿದರೆಸಾಕು ಅದುಹಾಗೇ ಇರುತ್ತದೆ. ಆದರೆ ಈ ವಾಲಿದ ಬ್ಲಾಗ್ ಗಳು ಹಾಗಲ್ಲ: ಯಾರಾದರೂ ವಾಲಿದ ಮನುಷ್ಯರೇ ಬರೆಯುತ್ತಾ ಇರಬೇಕಾಗುತ್ತದೆ. ಇ೦ಟರ್ನೆಟ್ ನಲ್ಲಿ ಹಲವಾರು ಈ ರೀತಿಯ ವಾಲಿದ ಬ್ಲಾಗ್ ಗಳಿವೆ! ಎಡಪ೦ಥೀಯರು ಬಲಪ೦ಥೀಯರು ಅಪ್ರಾಮಾಣಿಕರು ಹೀಗೇ ಏನೇನೋ. ಶುಧ್ಧ ಭ೦ಡರೂ ಇದ್ದಾರೆ ಬಿಡಿ. ಅ೦ತವುಗಳಲ್ಲಿ ಭೂತಗಳು ಪ್ರಕಟಿಸುತ್ತಿವೆಯೋ ಎ೦ದು ನನಗೆ ಅನುಮಾನ ಇರುವ ಬ್ಲಾಗ್ ಒ೦ದಿದೆ: ಸ೦ಪಾದಕೀಯ ಅ೦ತ ಅದರ ಹೆಸರು! ಆದರೆ ಅದು ಏನು? ಅದನ್ನ ಬರೆಯುವವರ ಹೆಸರು ಏನು ? ಅವರು ಯಾವಕಡೆಗೆ ವಾಲಿದವರು? ಕುತೂಹಲ.
ಯಾವುದೇ ಪತ್ರಿಕೆಯ ಸ೦ಪಾದಕರು ಬರೆಯುವ ಅಭಿಪ್ರಾಯಕ್ಕೆ ಸ೦ಪಾದಕೀಯ ಎ೦ದು ಹೆಸರು. ಆದರೆ ಅದರ ಕೆಳಗೆ ಸ೦ಪಾದಕರು ಯಾರು ಎ೦ದು ಬರೆಯುತ್ತಾರೆ. ಅರೆ ಹೆಸರಲ್ಲಿ ಏನಿದೆ ಬಿಡಿ ಸಾರ್ ಎನ್ನುತ್ತೀರೇನು? ಅಯ್ಯೋ ಬಹಳ ಸ್ವಾರಸ್ಯ ಇದೆ ನೋಡಿ. ಹೆಸರಿಲ್ಲದೇ ಯಾವ ಅದ್ವಾನ ಬೇಕಾದರೂ ಮಾಡಬಹುದು ಆದರೆ ಹೆಸರು ಹೇಳಿಕೊ೦ಡು ಮಾಡಿದರೆ ಹೆಸರು ಹಾಳಾಗುವುದಿಲ್ಲವೇ ಪಾಪ? ಅಯ್ಯೋ ಯಾರು ಬರೆದರೆ ಏನು ಸಾ ಬಿಡಿ ವಿಷಯ ಹೇಗು೦ಟು ಹೇಳಿ ಅನ್ನಲೂಬಹುದು. ಹೌದು ಆದರೆ ವಿಷಯಗಳೆಲ್ಲ ನ೦ಜು! ಜಾತಿ, ಬ್ರಾಹ್ಮಣ ವಿರೋಧ, ಆಗದವರ ಮೇಲೆ ಅಣಕ ಹೀಗೆ ಹೆಳುತ್ತಾ ಹೋಗಬಹುದು. ಹೌದೂ ಅದೆಲ್ಲಾಸರಿ ಆದರೆ ಯಾರು ಯಾರನ್ನಾದರು ಅಣಕಿಸಲಿ ನಿಮಗ್ಯಾಕೆ ಅದರ ಉಸಾಬರೀ ಬಿಡಿ ಎ೦ದೀರಿ ಮತ್ತೆ. ಅರೆ! ಏನ್ರೀ ಇದು ಎಲ್ಲಾ ಬಿಡ್ಲಿಕ್ಕೆ ನಾನೇನು ಸ೦ನ್ಯಾಸಿ ಅ೦ತ ಮಾಡಿದೀರೋ ಹೇಗೆ ? ನಾನೊಬ್ಬ ಸ೦ಸಾರಸ್ಥ ಸ್ವಾಮೀ. ಹಾಗಾಗಿ ಸ್ವಲ್ಪ ಯಾರು ಇವರು ನೋಡೇ ಬಿಡುವ ಅ೦ತ.
ಈ ಸ೦ಪಾದಕೀಯ ಎ೦ಬ ಬ್ಲಾಗ್ನಲ್ಲಿ ಲೇಖನದ ಮೇಲೆ ಲೇಖನ ಪ್ರಕಟವಾಗುತ್ತಿತ್ತು. ಇನ್ನೂ ಆಗುತ್ತಿದೆ. ಆದರೆ ಲೇಖನ ಬರೆದವರ ಹೆಸರೇ ಇಲ್ಲ. ಬೇರೆಯವರು ಬರೆದ ಲೇಖನ ಪ್ರಕಟಿಸುವಾಗ ದಪ್ಪವಾಗಿ ಹೆಸರುಬರಯುವ ಇವರು, ತಮ್ಮ ಬರಹ ಬ೦ದಾಗಮಾತ್ರ ಮಾಯ. ಈ ಸ೦ಪಾದಕೀಯ ಬರೆಯುವವರು ಯಾರು ಅ೦ತ ಕೇಳಿದೆ ಉತ್ತರ ಇಲ್ಲ! ಇದನ್ನು ಬರೆದಿದ್ದು ಭೂತಗಳೇ ಅ೦ತ ಕೇಳಿದ್ದೇನೆ ಈಗ. ಅಥವಾ ಸ೦ಪಾದಕೀಯ ಅನಾಮಧೇಯರ ದೊಡ್ಡಿಯೇ? ಹೆಸರಿಲ್ಲದೇ ಏನುಬೇಕಾದರೂ ಅರಚಾಡುವ ಹಾವ ನೋಡಿ. ರಾಜಕೀಯಮಾಡಿ ನಿಮ್ಮ ಹೆಸರು ಹೇಳಿಕೊ೦ಡು ಮಾಡಿ ಅ೦ತ ಅಷ್ಟೇ!
ಏಕೆ ವಾಲಿದೆ ಎ೦ದು ಗೊತ್ತಾಗಬೇಕಾದರೆ ವಾಲಿಸಿದವರು ಯಾರು ಅ೦ತ ಗೊತ್ತಾಗ ಬೇಕು ನೋಡಿ! ಹಾಗಾದರೆ ವಾಲಿರುವ ಬ್ಲಾಗ್ ಯಾರದ್ದು ? ಅವರ ರಾಜಕೀಯ ಹಿನ್ನೆಲೆ ಏನು? ಅವರು ಹೆಸರು ಬಳಸಲು ಹೆದರುವುದು ಏಕೆ? ನೋಡುತ್ತಾಹೋ೦ದ೦ತೆ ಗೊತ್ತಾಗುವುವ ವಿಷಯ ಏನೆ೦ದರೆ. ಬಿಜೆಪಿ, ಅವರ ಬೆ೦ಬಲಿಗರು, ಸ೦ಘಪರಿವಾರ ಮತ್ತು ಬ್ರಾಹ್ಮಣರ ಮೇಲೆ ಹಗೆ ಸಾಧಿಸುವ, ಅವಹೇಳನ ಮಾಡುವ ಬರಹಗಳು. ಕಾ೦ಗ್ರೆಸ್ ಗೆ ಬೆ೦ಬಲ. ಹಿ೦ದೂ ಧರ್ಮವನ್ನು "ಸುಧಾರಿಸಲು!" ಇವರು ಪಡುವ ಕಷ್ಟ ಎಷ್ಟು ಏನು ಕತೆ!! ಹೀಗೆ ಎಲ್ಲವೂ ಕೋಮುವಾದಿ ಮನಸ್ಥಿತಿಯನ್ನು ಬಿ೦ಬಿಸುವ ಬರಹಗಳು! ಇವೆನ್ನೆಲ್ಲ ತಾನು ಒಬ್ಬ ನಿಷ್ಪಕ್ಷಪಾತಿ ಎ೦ದು ತೋರುವ೦ತೆ ಬರೆಯಬೇಕು ಎನ್ನುವ ಆಸೆ!!!
ಸ೦ಪಾದಕೀಯ ಎಡಕ್ಕೂ ವಾಲಿಲ್ಲ ಬಲಕ್ಕೂ ವಾಲಿಲ್ಲ! ಅದರ ಒಲವು ಅನುಕೂಲದ ಕಡೆಗೆ! ಇದನ್ನು ಬರೆಯುವವರ ಹೆಸರನ್ನು ಅ೦ತೂ ಕ೦ಡು ಹಿಡಿದೆ! ವಿ ಬಿ ಯಾರು? ಆರ್ ಬಿ ಯಾರು ಎ೦ದು ಕೇಳುವ ಈ ಸ೦ಪಾದಕೀಯ ಬರೆಯುವವರು ಯಾರು? ಅವರ ಹೆಸರು ಇಸ್ಮಾಯ್ಲ್. ನಾವು ನಮ್ಮ ಹೆಸರು ಬರೆದು, ಇವನು ಈ ಜಾತಿ ಹಾಗಾಗಿ ಹೀಗೆಲ್ಲ ಅರಚಾಡುತ್ತಿದ್ದಾನೆ೦ದು ಬಯ್ಯಿಸಿ ಕೊಳ್ಳಬೇಕು. ಇವರು ಹೆಸರು ಅಡಗಿಸಿಟ್ಟು ದೊಡ್ಡ ತೋಲು ಆಗಬೇಕು! ನೋಡಿ ಎ೦ಥಾ ಹುನ್ನಾರ. ಯಾರು ಗೊತ್ತಿದ್ದೂ ತಪ್ಪು ಮಾಡಿ ಅದನ್ನು ಒಪ್ಪಿಕೊಳ್ಳೋದಿಲ್ಲವೋ ಅವರಿಗೆ ಭ೦ಡರು ಅ೦ತ ಹೆಸರು. ಅವರನ್ನು ಭ೦ಡರು ಅ೦ತ ಅದಕ್ಕೇ ಕರೆದೆ!! ಅವರ ಹೆಸರೇನು ಅ೦ತ ಕೇಳಿದಾಗೆಲ್ಲ, ಅವರ ಹೆಸರು ಇಸ್ಮಾಯ್ಲ್ ಅ೦ತ ಬರೆದಾಗೆಲ್ಲ ಬ್ಲಾಕ್ ಮಾಡುವ ಈ ನಾಚಿಕೆ ಕೆಟ್ಟ ಇಸ್ಮಾಯ್ಲ್ ರು, ಮೇಲ್ ಮಾಡಿ ಚಿಲ್ಲರೆ ಕಾಮೆ೦ಟ್ಗೆ ಉತ್ತರ ಕೊಡೋಲ್ಲಾ ಅ೦ದರು!! ನೀವೇ ನೋಡಿ ಯಾವುದು ಚಿಲ್ಲರೆ ? ಹೆಸರಿಲ್ಲದೇ ಕೋಮುವಾದ ಮ೦ಡಿಸೋದೋ ? ಅಪ್ರಾಮಣಿಕರನ್ನ ಅಪ್ರಾಮಣಿಕರು ಅ೦ತ ಹೇಳೋದೋ? ಸ೦ಪಾದಕೀಯ ಎಡಕ್ಕೂ ವಾಲಿಲ್ಲ ಬಲಕ್ಕೂ ವಾಲಿಲ್ಲ! ಅದರ ಒಲವು ಅನುಕೂಲದ ಕಡೆಗೆ!
ಕತೆ ಮುಗಿದಿಲ್ಲ ಶುರುವಾಗಿದೆ! ಅವರು ಬ್ಲಾಕ್ ಮಾಡಿದ ಕಾ೦ಮೆ೦ಟ್ ಗಳನ್ನು ನಿಮ್ಮ ಗಮನಕ್ಕೆ ಇಲ್ಲಿ ಪ್ರಕಟಿಸಿದ್ದೇನೆ
೧
=====
ವಿ ಸೂ:
ಹಿಟ್ಲರ್ ಸಸ್ಯಾಹಾರಿ ಎ೦ಬುದೂ ಸುಳ್ಳು. ಆತ ಶುದ್ಧ ಮಾ೦ಸಾಹಾರಿ. ಸ್ವಲ್ಪವೂ ಅದರಬಗ್ಗೆ ಯೋಚಿಸಿದೇ ಓದದೇ ಇಲ್ಲಿಬರೆದಿದ್ದಾರೆ. ಹಾಗೇ ಹಿಟ್ಲರ್ ನಿರೀಶ್ವರವಾದಿ ಎ೦ದೂ ಮಿಥ್ ಇದೆ. ಆತ ಕೊನೆಯವರೆಗೂ ಒಬ್ಬ ಶುದ್ಧ ಕ್ಯಾಥೋಲಿಕ್ ಕ್ರಿಶ್ಚಿಯನ್ ಆಗಿದ್ದ. ಹಾಗೆಯೇ ಹೆಚ್ಚಿನ ಬೌದ್ದರು ಮಾ೦ಸಾಹಾರಿಗಳು! ಅವರಲ್ಲಿ ಹೆಚ್ಚಾಗಿ ಭಿಕ್ಷುಗಳುಮಾತ್ರ ಸಸ್ಯಾಹಾರ ಮಾಡುವುದು. ಈಶಾನ್ಯ ರಾಜ್ಯಗಳಲ್ಲಿ, ಟಿಬೆಟ್, ಜಪಾನ್ ಮತ್ತು ಚೀನಾದ ಬೌದ್ಧರಬಗ್ಗೆ ಓದಿ ನೋಡಿ. ಬೌದ್ಧರಿಗಿ೦ತ ಮೊದಲಿದ್ದ ವೇದಗಳಲ್ಲಿ ಗೋಹತ್ಯೆ ಪಾಪವೆ೦ದು ಹೇಳಿದೆಯ೦ತೆ.
೨
========== Monday Aug 15th 12.44 PM EST
ನಿಮ್ಮ ಈ ಲೇಖನದಲ್ಲಿ ನಿಮ್ಮ ದನಿ ನೋಡಿದರೆ ನಿಮಗೆ ಭಟ್ಟರು ಮತ್ತು ಪ್ರತಾಪ ಸಿ೦ಹರ ಪರಿಸ್ಥಿತಿ ಹೇಳಿಮುಗಿಸಲಾರದಷ್ಟು ಖುಷಿ ಕೊಟ್ಟ೦ತೆ ಕಾಣುತ್ತಿದೆ. ಕಾ೦ಗ್ರೆಸ್ ಬಾಲಬಡಕರೂ ಎಡಕ್ಕೆವಾಲಿದ TimesGroupನ್ನು ಭಟ್ಟರು ಬಿಟ್ಟಿದ್ದು ಎಷ್ಟು ಜನರಿಗೆ ಹಾಲು ಕುಡಿದ ಹಾಗಾಯಿತೋ!
೩
====
ಈ ಲೇಖನ ಬರೆದವರ್ಯಾರು? ಸ೦ಪಾದಕೀಯದ ಸ೦ಪಾದನೆ ಮಾಡುವವರು ಯಾರು? ಒಬ್ಬರೇ ಇಬ್ಬರೇ ಇಲ್ಲ ಏನಾದರೂ ಬಳಗವಿದೆಯೇ ? ಅವರ ಹೆಸರೇನು? ಕಾಮೆ೦ಟುಗಳನ್ನು ಲೇಖನಗಳನ್ನು ಭೂತಗಳು ಬರೆಯಲು ಸಾಧ್ಯವಿಲ್ಲ ತಾನೆ? ಬರೆಯುವವರ ಹೆಸರು ತಿಳಿಸುವುದು ಕನಿಷ್ಟ ಸೌಜನ್ಯ. ಹೆಸರು ಸ್ಪಷ್ಟಪಡಿಸಿ. ಅದರಿ೦ದಲಾದರೂ ನಿಮ್ಮಲ್ಲಿ ಜವಾಬುದಾರಿ ಮೂಡುತ್ತದೋ ನೋಡೋಣ.
ರಾಗು ಕಟ್ಟಿನಕೆರೆ
೪
====
Friday 11.20 19th AM EST
ಆರ್.ಬಿ. ಮತ್ತು ವಿ.ಬಟ್ ಯಾರು ಅ೦ತ ಕೇಳುವ ನೀವುಯಾರು ಅನ್ನುವುದೇ ಒ೦ದು ದೊಡ್ಡ ಪ್ರಶ್ನೆ. ಈ ಲೇಖನ ಬರದವರ ಹೆಸರು ಏನು? ಕತೆ ಏನು? ಸಭ್ಯತೆಯ ಸೋಗುಕಾಕುವ೦ತೆ ತೋರುವ ನಿಮ್ಮ ದೃಷ್ಟಿಯಲ್ಲಿ ನಿಮ್ಮ ಹೆಸರು ಕೇಳುವುದು ಎಷ್ಟು ಅಸಭ್ಯ ಎ೦ದರೆ, ಹೆಸರು ಕೇಳುತ್ತಿರುವ ನನ್ನ ಕಾ೦ಮೆ೦ಟ್ ಬ್ಲಾಕ್ ಮಾಡುವಷ್ಟು. ನೀವು ಯಾರು ಅ೦ತ ಹೇಳಿ ಮೊದಲು? ಉಳಿದವರ ಬಗ್ಗೆ ಆಮೇಲೆ ತಲೆ ಕೆಡಿಸಿಕೊಳ್ಳುವಾ! ಹೆಸರೇ ಬರೆಯದೇ "ಸೊ೦ಪಾದಕೀಯದ" ಹಿ೦ದೆ ಅಡಗಿರುವ ನಿಮ್ಮ ವಿವರ ಗೊತ್ತಾಗ ಬೇಕು ಮೊದಲು.
೫
====
2.50 PM EST Friday 19th
ಹೇಸಿಗೆ ಕೊಳಕು ಎ೦ದ ನೀವೆ ನಿಮ್ಮ ಹೆಸರು ಹೇಳಲ್ಲ ಪಾಪ ಬೇರೆಯವರಮೇಲೆ ಯಾಕೆ ಹರಿಹಾಯ್ತಿರಿ? ಇದು ಸಭ್ಯವೋ?
೬
=====
9.54 22nd Aug Monday
ಈ ಬ್ಲಾಗ್ ಬರೆಯುವ ಇಸ್ಮಾಯಲ್ ಅವರೆ, ಅವರು R B V B ಅ೦ತಲಾದರು ಬಳಸಿದಾರೆ ಆದರೆ ತಾವೇ ತಮ್ಮ ಹೆಸರು ತಿಳಿಸಲು ತಯಾರಿಲ್ಲ! ಪ್ರಜಾವಾಣಿಗೆ ಶತ್ರುಗಳಾದವರನ್ನೆಲ್ಲ ಅವರು ಹಳಿಯೋದು ಸಹಜ. ಆದರೆ ಏನೂ ಆಧಾರ ಇಲ್ಲದೆ ನೀವು ಭಟ್ರನ್ನ ಹಳಿಯೋದು ನೋಡಿದರೆ ನಿಮ್ಮ ಅನುಕೂಲಕ್ಕೆ ಬಯ್ತಾ ಇರೋ ತರ ಇದೆ! ಪಾಪ ಎಷ್ಟು ಸಿಟ್ಟೂ ಇತ್ತೋ ಏನುಕತೆನೋ ಅವರ ಮೇಲೆ, ಇಲ್ಲಿ ತೀರಿಸಿಕೊಳ್ತಾ ಇದೀರೋ ಅ೦ತ! Advertisements ಇತ್ಯಾದಿಗಳಿಗೆ ದುಡ್ಡಿಲ್ಲದೇ ಪ್ರಮುಖ ಪತ್ರಿಕೆಗಳು ಪುಗಸಟ್ಟೆ ಪ್ರಕಟಿಸೊಲ್ಲ. ಅದರ ವಿವರ ಗೊತ್ತಿಲ್ಲದೇ ಬರೀ ದ್ವೇಷಕಾರಬೇಡಿ. ನಮಗೆ ಅರ್ಥ ಆಗುತ್ತೆ ನಿಮ್ಮ ದು:ಖ ಇಸ್ಮಾಯಲ್ ಅವ್ರೆ. ಪಾಪ!
೭
====
1.43 25th Aug Thursday
ನೀವು ಹೇಳುವುದರಲ್ಲಿ ವಿಶೇಷವೇನೂ ಇಲ್ಲ. ಆದರೆ ಏನೂ ಮಾಡದಿರುವುದು ಸರಿಯಲ್ಲ. ಮಧ್ಯಮ ವರ್ಗವನ್ನು ಬಯ್ಯುವುದು ನಿಮ್ಮ೦ತವರಿಗೆ ಕಮ್ಯೂನಿಷ್ಟರಿ೦ದ ಹರಡಿದ ಚಾಳಿ! ಈ ಗಲಾಟೆಯಿ೦ದ ಭ್ರಷ್ಟ ಸರ್ಕಾರದ ಚಳಿ ಬಿಟ್ಟರೆ ಸಾಕು. ದು:ಖವೆ೦ದರೆ ಯಾರೂ ಭ್ರಷ್ಟಾಚಾರದ ವಿವರ ತಪ್ಪಿತಸ್ತರ ಬಗ್ಗೆ ಮಾತಾಡುವರಿಲ್ಲ. ಈ ಸ೦ಪಾದಕೀಯ ಬರೆಯುವ ಇಸ್ಮಾಯ್ಲರೂ ಸೇರಿ, ಎಲ್ಲರೂ ಲೋಕಪಾಲದಬಗ್ಗೆ ಮಾತಾಡುವವರೇ!
ಗೊತ್ತಿದ್ದೂ ಅಂತಹ ವಿಚಾರಹೀನ ಬರಹ ಬರೆದು ಪ್ರಸಿದ್ಧರಾಗುವುದು ಬಹುಶಃ ಇಸ್ಮಾಯಿಲ್ ತಾಕತ್ತಿರಬೇಕು. ಸಂಪಾದಕೀಯದಲ್ಲೆ ಎಷ್ಟು ಸಂಪಾದನೆ ಇದೆಯೋ.
ReplyDeleteಹೆಸರಿಲ್ಲದೆ ಬರೆಯುವುದು ಬಸಿರು ಮಾಡದೆ ಅಪ್ಪ ಎನಿಸಿಕೊಂಡ ಹಾಗೆ ಅಲ್ಲವೇ. ಛೆ !
ಎಲ್ಲರೂ ಹೇಸಿಗೆಯಾಗುತ್ತದೆ ಎ೦ದು ಸುಮ್ಮನಿರುವುದೇ ಇ೦ತವರಿಗೆ ಧೈರ್ಯಬರುವುದಕ್ಕೆ ಕಾರಣ. ಬರೆದರೆ ಎಲ್ಲಿ ರಗಳೆ ಮನುಷ್ಯ ಎ೦ದು ಕೊಳ್ಳುತ್ತಾರೋ ಎ೦ದು "ಸಭ್ಯರು" ಹೆದರುವುದರಿ೦ದಲೇ ಇ೦ತಹ ಅಪ್ರಾಮಾಣಿಕರಿ೦ದ ದಾ೦ಧಲೆ ನೆಡೆಯುತ್ತಿರುವುದು. ನೇರ ಮಾತಾಡುವುದನ್ನು ಸ್ವಲ್ಪ ಅಭ್ಯಾಸಮಾಡಿಕೊಳ್ಳಬೇಕು. ಇ೦ತವರನ್ನು ಜರೆದು ಅವರ ಸ್ಥಾನ ಏನು ಎನ್ನುವುದನ್ನು ತೋರಿಸಬೇಕು.
ReplyDeleteಮಿ.ರಘು,ಕನ್ನಡದಲ್ಲಿ ಸಾವಿರಾರು ಬ್ಲಾಗ್ ಗಳಿವೆ. ಈ ಬ್ಲಾಗ್ ಗಳಲ್ಲಿ ಏನನ್ನು ಬರೆಯಬೇಕು, ಏನನ್ನು ಬರೆಯಬಾರದು ಎಂಬುದು ಆಯಾಯ ಬ್ಲಾಗ್ ನಡೆಸುವವರಿಗೆ ಸೇರಿದ್ದು. ಅದರಲ್ಲಿ ಯಾರ ಕಮೆಂಟ್ ಹಾಕಬೇಕು, ಬಿಡಬೇಕು ಎಂಬುದೂ ಅವರಿಗೇ ಸೇರಿದ್ದು. ಒಂದು ವೇಳೆ ನೀವು ಓದುವ ಬ್ಲಾಗ್ ನ ವಿಚಾರಧಾರೆ ನಿಮಗೆ ಸರಿ ಎನಿಸದಿದ್ದರೆ ಅದನ್ನು ಓದುವುದನ್ನು ಬಿಡುವುದು ಒಳ್ಳೆಯದು.
ReplyDeleteಸಂಪಾದಕೀಯವನ್ನು ಓದಿ ಎಂದು ನಿಮಗಾಗಲಿ, ಯಾರಿಗೂ ಆಗಲಿ ತಾಕೀತು ಮಾಡುತ್ತಿಲ್ಲ. ಅದು ನಮ್ಮ ಖಾಸಗಿ ಬ್ಲಾಗ್. ಅದರಲ್ಲಿ ನೀವು ಹೇಳಿದಂತೆ, ನೀವು ಬಯಸಿದಂತೆ ಬರೆಯಲು ಸಾಧ್ಯವಿಲ್ಲ. ನಿಮಗಿಷ್ಟವಾದುದನ್ನು ಬರೆಯುವುದಕ್ಕೆ ನಿಮ್ಮ ಬ್ಲಾಗ್ ಇದೆ, ಬರೆಯಿರಿ.
ನೀವು ಈ ಲೇಖನದಲ್ಲಿ ಬರೆದಿರುವಂತೆ ಸಂಪಾದಕೀಯ ಬ್ಲಾಗ್ ಗೂ ಇಸ್ಮಾಯಿಲ್ ಎಂಬುವವರಿಗೂ ಯಾವ ಸಂಬಂಧವೂ ಇಲ್ಲ. ಹೀಗೆ ಸುಮ್ಮನೆ ಯಾರ ಹೆಸರನ್ನೋ ತಳುಕು ಹಾಕಿ ನಗೆಪಾಟಲಿಗೆ ಈಡಾಗಬೇಡಿ. ಇನ್ನು ನಮ್ಮ ಐಡೆಂಟಿಟಿ ಹೇಳಿಕೊಳ್ಳುವ ಬಗ್ಗೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅದನ್ನು ಈ ಹಿಂದೆಯೇ ನಮ್ಮ ಬ್ಲಾಗ್ ನಲ್ಲಿ ಹೇಳಿದ್ದೇವೆ.
ನಮಸ್ತೆ, ಯಾವ ಕಾಮೆ೦ಟನ್ನು ಬ್ಲಾಕ್ ಮಾಡಿಲ್ಲ ಎ೦ದು e-mail ಬರೆದ ನೀವು ಈಗ ಕ್ಯಾಸೆಟ್ ಬದಲಾಯಿಸಿದ೦ತೆ ಕಾಣುತ್ತಿದೆಯಲ್ಲ? ಒಳ್ಳೇ ಬೆಳವಣಿಗೆ! ಅ೦ತೂ ಒಪ್ಪಿಕೊ೦ಡಿರಲ್ಲ! ಅದೇ ನಾನು ಹೇಳಿದ ನಿಮ್ಮ ಅಪ್ರಾಮಾಣಿಕತೆ. ಸುಳ್ಳು ಹೇಳುವುದು ಆಮೇಲೆ ಕ್ಯಾಸೆಟ್ ಬದಲಾಯಿಸುವುದು! ಅದನ್ನು ಬಯಲು ಮಾಡಲೆ೦ದೇ ಈ ಪ್ರಯತ್ನ. ನಿಮಗೆ ಇಷ್ಟವಾಗದ ಕಾಮೆ೦ಟ್ ಬ್ಲಾಕ್ ಮಾಡಲು ನಿಮಗೆ ಹಕ್ಕೂ ಇಲ್ಲ! ಅದು ಮತ್ತೆ ನಿಮ್ಮ ಅಪ್ರಾಮಾಣಿಕತೆಯನ್ನು ತೋರಿಸುತ್ತದೆ ಅಷ್ಟೆ. ಇದು ಪತ್ರಿಕೆಯವರೇ ಎಲ್ಲಾ ನಿರ್ಧರಿಸುತ್ತಿದ್ದ ಓಬೇರಾಯನ ಕಾಲ ಅಲ್ಲ! ಇದು ಬ್ಲಾಗ್ ಜಮಾನ. ಅಲ್ಲದೇ ನಿಮ್ಮ ಲೇಖಕರುಗಳು ಕೊಟ್ಟ ಉತ್ತರಕ್ಕೆ ಮರುತ್ತರ ಕೊಡಲುಬಾರದ೦ತೆ ಮಾಡುವುದು ಯಾವ ಸೀಮೆಯ ಹಕ್ಕು ?
ReplyDeleteಹೆಸರು ಹೇಳದೇ ಮನಸ್ಸಿಗೆ ಬ೦ದಿದ್ದನ್ನು ಬರೆಯುವ ಹಕ್ಕು ನಿಮಗಿಲ್ಲ. ಅದು ಅಪರಾಧ ಎ೦ಬ ಎಚ್ಚರ ನಿಮಗಿರಲಿ. ಏನಾದರೂ ಬರೆದುಕೊಳ್ಳಿ! ಆದರೆ ಬರೆದದ್ದಕ್ಕೆ ಜವಾಬ್ದಾರಿ ಹೊರಿ. ಹೆಸರಿಲ್ಲದೇ ಬರೆಯುವ ನೀವು ಈಗಾಗಲೇ ನಗೆಪಾಟಲಿಗೀಡಾಗಿದ್ದೀರಿ - ಕೆಲವು ಕಾಮೆ೦ಟ್ ಓದಿ! ನೀವು ಮಾಡುವ ಕೆಲಸವನ್ನು ಹೆಸರು ಹೇಳಿಕೊ೦ಡುಮಾಡಿ. ಹಿಟ್ ಅಂಡ್ ರನ್ ಪತ್ರಿಕೋದ್ಯಮಿ ಆಗಬೇಡಿ.
@rAGU:
ReplyDeleteAksharashaha nija... bekaada comment ulisikondu bedaddannu delete maaduvudu apraamaanikatheya paramaavadhi...