ಓದುವುದು ಬೇರೆ ಆದರೆ ನಮಗೇ ಹೊಳೆದ ನಾವೇ ಕಂಡುಕೊಂಡ ಅಂಶಗಳು ಬೇರೆ. ಹಾಗೆ ಅವು ನಮಗೆ ಹೊಳೆದಾಗ ಆಗುವ ಆನಂದವೇ ಬೇರೆ. ಇಲ್ಲಿ ಕೆಲವನ್ನು ಕೆಳಗೆ ಬರೆದಿದ್ದೇನೆ. ಇದರಲ್ಲಿ ಮೊದಲನೆಯದು ಹಲವರಿಗೆ ಮೊದಲೆ ತಿಳಿದಿರಬಹುದು (ನನ್ನ ಸಂಶೋಧನೆ ಎಂದು ಮೊದಲ ತಲೆಬರಹ ಇತ್ತು)
1) ಯಕ್ಷಗಾನದ ಮಾತು ಹಿಂದೆ ನಮ್ಮ ಪೂರ್ವಿಕರು ದಿನ ನಿತ್ಯ ಆಡುವ ಶೈಲಿ. ಶೃತಿ ಬದ್ದವಾಗಿ ಮಾತಾಡುವುದು ಈಗಲೂ ನಮ್ಮ ಹವ್ಯಕ, ಈಡಿಗ, ಬಂಟರ ಜಾತಿಯಲ್ಲಿ ಇದೆ.
2) ಯಕ್ಷಗಾನದ ಆಯುಧಗಳು ಸಾಂಕೇತಿಕ ಮಾತ್ರ (ಅಬ್ಸ್ಟ್ರಾಕ್ಷನ್). ಬಿಲ್ಲಿಗೆ ಕೋಲು. ಗಧೆಗೆ ಬಡಿಗೆ. ಹೀಗೆ. ನೋಡುಗರ ಕಲ್ಪನೆಗೆ ಅವಕಾಶ ಹೆಚ್ಛು.
3) ಶೃತಿಗೆ ಹಾಡುವುದೆಂದರೆ ಶೃತಿ ಪೆಟ್ಟಿಗೆಯ ದೊಡ್ಡ ಸ್ವರಕ್ಕೆ ನಮ್ಮ ದೊಡ್ಡಸ್ವರ ಇನ್ನು ಉಳಿದ ಸಣ್ಣ ಸ್ವರಗಳು ಸಂವಾದಿ ಯಾಗುವಂತೆ ಹಾಡುವುದು
4) ಚಂಡೆ ಶುದ್ಧ ಅನುರಣನ ವಾದ್ಯವಲ್ಲ (ಇನ್ ಹಾರ್ಮೊನಿಕ್). ಹಾಗಾಗಿ ತಂಬೂರಿಗೆ ಹೊಂದುವುದಿಲ್ಲ.
5) ಕೊಳಲಿನ ಸ್ವರ ಹೇಗೆ ಹೊರಡುತ್ತದೆ?
6) ಯಕ್ಷಗಾನದ ಬಡಗು ತಿಟ್ಟಿನಲ್ಲಿ ಹೆಜ್ಜೆ ಹೋದಕಡೆ ದೇಹ ಹೋಗಿ ತಕ್ಷಣ ಮರಳುತ್ತದೆ. ತೆಂಕಿನಲ್ಲಿ ಹೆಜ್ಜೆ ಹೋದಕಡೆ ದೇಹ ಹೋಗಿ ಇನ್ನೂ ಅಲ್ಲೇಇದ್ದು ಸ್ವಲ್ಪ ಆಚೆಈಚೆ ತೊನೆದು ನಂತರ ಮರಳುತ್ತದೆ.
೭) ಯಕ್ಷಗಾನದಲ್ಲಿ ಮಾತಾಡುವಾಗ ಕೊನೆಯ ಅಕ್ಷರ ಎಳೆಯಬೇಕು .

ಆಯುಧಗಳ ಬಗ್ಗೆ ಸರಿ, ಅದೇ ರೀತಿ ಎಲ್ಲವೂ ಸಾಂಕೇತಿಕವೇ ಆಗುತ್ತದೆ. ಈ ಸಂಕೇತಗಳು ತೆಂಕುತಿಟ್ಟಿನ ಯಕ್ಷಗಾನಗಳಲ್ಲಿ ವೇಷಭೂಷಣಗಳಲ್ಲಿ ಕಾಣಬಹುದು. ಯಕ್ಷಗಾನದ ಮಾತುಗಳು ದಕ್ಷಿಣಕನ್ನಡದ ಕನ್ನಡದಂತೆಯೇ ಹೆಚ್ಚಾಗಿ ಇರುವುದು ಊರಿನ ಕಲೆಯಾದ್ದರಿಂದಲಿರಬೇಕು.
ReplyDeleteಬಯಲಾಟದ ಮಾತು ಎಲ್ಲ ಕಡೆ ದಕ್ಷಿಣಕನ್ನಡದಂತಿಲ್ಲ. ದಕ್ಷಿಣಕನ್ನಡದ ಪ್ರಭಾವ ಬಹಳ ಇರುವುದು ಹೌದು. ಘಟ್ಟದ ಮೇಲಿನ ತಾಳಮದ್ದಲೆಯಲ್ಲಿ ಆ ಆ ಪ್ರಾಂತದ ಮಾತೇಕಾಣುತ್ತದೆ. ಬಡಗು ತೆಂಕಿಗಿಂತ ಹಳೆಯದು ಹಾಗಾಗಿ ಬಡಗು ಹೆಚ್ಚಾಗಿ ಇರುವ ಯಾವುದೋ ಪ್ರದೇಶ ಬಯಲಾಟದ ಮೂಲ ಎಂದು ಅನುಮಾನಿಸಿದ್ದಾರೆ. ಬ್ರಹ್ಮಾವರ ಕೊಲ್ಲೂರು ಮಧ್ಯ ಇರಬಹುದು ಎಂದೂ ಅನುಮಾನಿಸಿದ್ದಾರೆ.
ReplyDelete