04 September 2008

ರಕ್ತಾಕ್ಷಿ ಶವಚರದ ಬದ್ರವದ................... - ಕಲ್ಲುಮರಿಗೆ ಶಾಸನ

ಹ೦ದಿಗೋಡಿನಿ೦ದ ಮುಡಿಗೇಸರಕ್ಕೆ ಹೋಗುವ ದಾರಿಯಲ್ಲಿ ಬಲಬದಿಗೊ೦ದು ಕಲ್ಲುಮರಿಗೆ ಇದೆ. ಯಾರೋ ಪುಣ್ಯಾತ್ಮ ಇಟ್ಟ ಮರಿಗೆ. ನಿ೦ತ ಮಳೆನೀರು ಮಧ್ಯಾಹ್ನದ ಬಿಸಿಲ ಹೊತ್ತಿಗೆ ದನಕರುಗಳ ಆಸರಿಗೆ. ಆ ಮರಿಗೆಯ ಮೇಲೊ೦ದು ಶಾಸನ. ಅದನ್ನೋದುವುದು ಸುತ್ತಮುತ್ತಲ ಹುಡುಗ ಹುಡುಗಿಯರಿಗೊ೦ದು ಸವಾಲು. ಆಗಷ್ಟೇ ಅಕ್ಷರ ಕಲಿತವರಿಗೆ ಮಹಾಕಾವ್ಯ ಬರೆಯುವ ಕನಸು!

ನೆನಪಿರುವಷ್ಟನ್ನು ಇಲ್ಲಿ ಬರೆದಿದ್ದೇನೆ:
"ರಕ್ತಾಕ್ಷೀ ಶವಚರದ ಬದ್ರವದ ಚ೦ದ್ರಗುಪ್ತ ಮೌರ್ಯಃ.................. ಚದಟಿಶ್ಮಿಯವರು"

"ರಕ್ತಾಕ್ಷೀ ಸ೦ವತ್ಸರದ ಬಾದ್ರಪದ ಶುಕ್ಲ ಪಕ್ಷ......" -- ಉಳಿದಿದ್ದರ ಅರ್ಥವೇನೋ ಗೊತ್ತಿಲ್ಲ.

ಇನ್ನೊಮ್ಮೆ ಓದಿದರೆ ಈಗ ಅರ್ಥವಾಗ ಬಹುದೇನೋ...ಹತ್ತಿರ ಇದ್ದ ಮಠಕ್ಕೆ ಯಾರೋ ದೇಣಿಗೆ ಕೊಟ್ಟಿದ್ದ ಮರಿಗೆಯ೦ತೆ ಅದು..

ಗಣಪತಿ ಹಬ್ಬದ ಶುಭಾಷಯಗಳು.

ರಾಗು

No comments:

Post a Comment

Please leave a note about what you think about this write up. Thanks.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...