ಆದರದಿ ನುತಿಪರಘ ಹರಿವೆಯೆಂದುರೆ ನಂಬಿ
ಪದ ಮತ್ತು ರಚನೆ: ನಮದೂಕಿ ಬರದು ಒದರ್ಯದೆ
ಮದ್ದಲೆ: ಶಿವರಾಮ ಕೋಮಾರ ಬೀಗಾರ್
ಚಂಡೆ: ನಾರಾಯಣ ಕೋಮಾರ ಬೀಗಾರ್
ಶ್ರುತಿ: ತಿಮ್ಮಣ್ಣ ಭಟ್ಟ ನೆಡಿಗೆಮನೆ
ಧಾಟಿ ನಾಟಿ, ತಾಳ ಝ೦ಪೆ
ಆದರದಿ ನುತಿಪರಘ, ಹರಿವೆಯೆ೦ದುರೆನ೦ಬಿ|
ಅವಲಕ್ಕಿ ಕಜ್ಜಾಯ, ತ೦ದಿರಿಸಿ ಓಲೈಪೊ|
ಆನತರಿಗೆ ಅನುವಾಗೊ |
ಕಟ್ಟೀನಕೆರೆವಾಸ, ಮಧುಕೇಶನಣುಗ ||ಪ||
(ಝ೦ಪೆ ಎರಡನೇ ಕಾಲ)
ಮೂಡಿದೊಡೆ ನಿನ್ನ ಕುಳ್ಳಿರಿಸಿ ಪೂಜೆಯ ಮಾಡಿ|
ಹೂಡಿ ನೈವೇದ್ಯಗಳ ಹಾಡಿಪದಗಳನು
ರೂಢಿಯೊಳು ನೆಡೆದುಕೊಳುವಾಳುಗಳ ಕಾಪಾಡೊ|
ಜೋಡಿಸಿದೆವೆಲ್ಲ ಕರಗಳನು ||೧||
ಇನ್ನೂ ಕೇಳಲಿಲ್ಲ, ಓದಿದ್ದು ಚೆನ್ನಾಗಿದೆ . ಕೇಳ್ದ ಮೇಲ್ ಕಮೆಂಟಿಪೆನ್ :)
ReplyDeleteಸೊಲ್ಗಳೆಲ್ಲವಂ ಆಲಿಸಲ್ಕೇನಾದರುಳಿದೊಡಂ ಉತ್ತರಿಪೆನ್
ReplyDelete