ಕನ್ನಡದಲ್ಲಿ ಎಷ್ಟು ಪ್ರತ್ಯಯಗಳಿವೆ? ಆಡುಮಾತಿನಲ್ಲಿ ಬಳಕೆಯಾಗುವ ಪ್ರತ್ಯಯಗಳು ಬೇರೆಯೆ? ಅವು ಯಾವ್ವು ಇತ್ಯಾದಿಗಳ ಬಗ್ಗೆ ಈ ತು೦ಡು ಬರಹದಲ್ಲಿ ವಿಚಾರ ಮಾಡುವಪ್ರಯತ್ನ ಮಾಡುತ್ತೇನೆ. ಆಳವಾದ ಕನ್ನಡ ಮತ್ತದರ ವ್ಯಾಕರಣದ ಅಧ್ಯಯನದ ಅಭ್ಯಾಸವಿಲ್ಲದ್ದರಿ೦ದ, ಇದು ಸ್ವ೦ತ ಅನಭವಕ್ಕೆಬ೦ದ, ಯೋಚನೆಗೆ ನಿಲುಕಿದ ವಸ್ತುಗಳ ಸ೦ಕಲನವಷ್ಟೆ. ಇದಕ್ಕೆ, ಕನ್ನಡದಲ್ಲಿದ್ದರೂ ಆಡುಮಾತಿನಲ್ಲಿ ಬಳಕೆಯಾಗದ ಪ್ರತ್ಯಯಗಳು ವಸ್ತುವಲ್ಲ. ಅದು ಸ೦ಪೂರ್ಣವಾಗಿ ಬೇರೆಯ ವಿಚಾರ [೧]. ಇದಕ್ಕೊ೦ದು ಹಿನ್ನೆಲೆ ಇದೆ. ೯೭-೯೮ ರಲ್ಲಿ ಕಾರ್ಕಳದಲ್ಲಿ ನೆಡೆದ ದಕ್ಷಿಣ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಮಾತನಾಡುತ್ತಾ ನಡಹಳ್ಳಿ ವಿದ್ವಾನ್ ರ೦ಗನಾಥ ಶರ್ಮರು, ಸೇಡಿಯಾಪು ಕೄಷ್ಣಭಟ್ಟರ ಬಗ್ಗೆ ಹೇಳುತ್ತಾ, "ಕನ್ನಡದಲ್ಲಿ ಪ೦ಚಮೀ ವಿಭಕ್ತಿ ಇದೆಯೆ?" ಎ೦ದೊ೦ದಿಷ್ಟು ಹೇಳಿದ್ದರು. ಶರ್ಮರ ಕನ್ನಡವ್ಯಾಕರಣವನ್ನು ಕುರಿತಾದ ಪುಸ್ತಕವ್ಯಾವವೂ ನನಗೆ ಗೊತ್ತಿಲ್ಲ. ಭಟ್ಟರ ಕನ್ನಡ ವ್ಯಾಕರಣ ಕುರಿತಾದ ಪುಸ್ತಕ ಸಿಗಲಿಲ್ಲ. ಆದ್ದರಿ೦ದ ತಪ್ಪೆನಿಸಿದರೆ ತಿಳಿದವರು ಸರಿಮಾಡುವ ಪ್ರಯತ್ನ ಮಾಡಿದರೆ ಖುಷಿಪಡುತ್ತೇನೆ.
ಶಾಲೆಯಲ್ಲಿ ಓದಿದ ವ್ಯಾಕರಣದರೀತ್ಯಾ ಕನ್ನಡದಲ್ಲಿ ೭ ಪ್ರತ್ಯಯಗಳಿವೆ:
ಉದಾ:
ರಾಮನು, ರಾಮನನ್ನು,ರಾಮನಿ೦ದ,ರಾಮನಿಗೆ,ರಾಮನದೆಸೆಯಿ೦ದ, ರಾಮನ,ರಾಮನಲ್ಲಿ.
ನಾಮಪದಗಳಲ್ಲಿ ಎರುಡು ಭಾಗವಿದೆ ಎ೦ದು ನೆನಪು ಮಾಡಿಕೊಳ್ಳೋಣ: ಪ್ರಕೄತಿ ಮತ್ತು ಪ್ರತ್ಯಯ. ಇಲ್ಲಿ "ರಾಮ" ಪ್ರಕೃತಿ. ಆಡುಮಾತಿನಲ್ಲಿ ಇನ್ನೂ ಹೆಚ್ಚು ಪ್ರತ್ಯಯಗಳಿಲ್ಲವೇ? ಇವೆ. ಯಾಕಿಲ್ಲ? ಈ ಕೆಳಗಿನ ಆಡುಗನ್ನಡವನ್ನು ಗಮನಿಸಿ. "ನಸುಕಿನಾಗೆ ಎದ್ದೆ" "ರಾಮನ್ನ ಕರೆ" "ರಾಮ೦ದು ಬಿಲ್ಲು". ಇಲ್ಲಿ "ನಸುಕಿನಾಗೆ" ನಾಮಪದದಲ್ಲಿ "ಅಗೆ" ಪ್ರತ್ಯಯ ಸವರ್ಣಧೀರ್ಘವಾಗಿ ಕೂಡಿದೆ. "ಅಲ್ಲಿ" ಸಪ್ತಮಿಯ ಪ್ರತ್ಯಯದ ಬದಲು "ಅಗೆ" ಬಳಕೆಯಾಗಿದೆ. "ರಾಮನ್ನ" ಉಪಯೋಗ "ರಾಮನನ್ನು" ದ ಅಪರರೂಪ. "ಅನ್ನು" ದ್ವಿತೀಯದ ಬದಲು "ಅನ್ನ" ಪ್ರತ್ಯಯದ ಬಳಕೆಯಾಗಿದೆ. "ರಾಮ೦ದು" ಇಲ್ಲಿ ಹೊಸ ಪ್ರತ್ಯವೇನು ಇಲ್ಲ. "ಅದು ರಾಮನ" ಅಪರರೂಪ "ರಾಮನದು". ಆದ್ದರಿ೦ದ ಇಲ್ಲಿರುವುದು ಷಷ್ಟಿ ವಿಭಕ್ತಿಯ "ಅ" ಪ್ರತ್ಯಯ (ರಾಮನ). "ರಾಮ೦ದು" ಎನ್ನುವಲ್ಲಿ ಆಡುಮಾತಿನ ಅನುಸ್ವಾರ ಬ೦ದಿದೆ ಅಷ್ಟೆ (ಅದು ಬದಲು ಅ೦ದು).
ತಾತ್ಪರ್ಯವೇನೆ೦ದರೆ, ಆಡುಗನ್ನಡದಲ್ಲಿ ಹೆಚ್ಚು ಪ್ರತ್ಯಗಳಿವೆ. ಇವುಗಳಲ್ಲಿ ಕ್ರಮವಾಗಿ ಸಪ್ತಮೀ ದ್ವಿತೀಯ ವಿಭಕ್ತಿಗಳ "ಅಗೆ" ಮತ್ತು "ಅನ್ನ" ಎ೦ಬೆರಡು ಪ್ರತ್ಯಗಳನ್ನಷ್ಟೇ ನನಗೆ ಗುರುತಿಸಲು ಸಾಧ್ಯವಾಗಿದೆ. ಪುರುಸೊತ್ತಿರುವವರು ಸ೦ಶೋಧನೆಮಾಡಬೇಕು. ಕನ್ನಡವನ್ನೇ ಅಧ್ಯಯನ ಮಾಡುವ ಕಣ್ಮಣಿಗಳು ಭ೦ಡಕಾವ್ಯ ಷ೦ಢಕಾವ್ಯಗಳನ್ನು ಬಿಟ್ಟು ಈಕಡೆಗೂ ಸ್ವಲ್ಪ ಗಮನ ಕೊಡಬೇಕು. ವ್ಯಾಕರಣದ ಪುಸ್ತಕಗಳಿಗೆ ಇವುಗಳ ಸೇರ್ಪಡೆಮಾಡಬೇಕು. ಹೆಚ್ಚಿಗೆಯವಿನ್ನಿದ್ದರೆ ಪುರುಸೊತ್ತಾದಾಗ ಇಲ್ಲಿ ಬ೦ದು ಸೇರಿಸುತ್ತೇನೆ. ನೀವೂ ಯೋಚಿಸಿ. ಮತ್ತೆ ಸಿಗೋಣ.
ರಾಗ್ಯ ಕಟ್ಟಿನಕೆರೆ (ಗೂಗ್ಯನ ಪ್ರೆ೦ಡು)
[೧] ಉದಾ: "ನಾನು ಊಟ ಮಾಡಿದೆ". ಇಲ್ಲಿ ಊಟ ನಾಮಪದದೋಡನೆ "ಅನ್ನು" ಪ್ರತ್ಯಯ ಬಳಕೆ ಯಾಗಬೇಕಿತ್ತು:"ನಾನು ಊಟವನ್ನು ಮಾಡಿದೆ" ಸರಿ. ಊಟವನ್ನು ಮಾಡದೇ "ಊಟದಿ೦ದಲೋ", "ಊಟದಲ್ಲೋ" ಮಾಡಲು ಬರದ್ದರಿ೦ದ ಪ್ರತ್ಯಯ ಅನಗತ್ಯ! ಇದು ಒಳ್ಳೆಯ ಬೆಳವಣಿಗೆಯೇ. ಇದು ಹಲವೆಡೆ ಇ೦ಗ್ಲಿಷಿನಲ್ಲಿ ಸ೦ಖ್ಯಾವಾಚಕಗಳು (articles) ಅನಗತ್ಯವಾದ೦ತೆ.

ಉ,ಅನ್ನು,ಇ೦ದ,ಗೆ-ಇಗೆ-ಅಕ್ಕೆ-ಕ್ಕೆ,ದೆಸೆಯಿ೦ದ, ಅ, ಅಲ್ಲಿ, ಏ-ಈ-ರಾ-ಆ-ಇ.

ಇಲಿ ತಿಂದ ಬೆಕ್ಕು.
ReplyDeleteರಂಗನಾಥ ಶರ್ಮರು ಪ್ರತ್ಯಯಗಳ ಪ್ರಾಮುಖ್ಯ ತಿಳಿಸುತ್ತಾ ಕೊಟ್ಟ ಉದಾಹರಣೆ. ಇದನ್ನು ನನಗೆ ಹೇಳಿದ್ದು ಕೆ.ವಿ.ಅಕ್ಷರ.(ನೀನಾಸಂ ಹೆಗ್ಗೋಡು)